Author: praveen

ಪಹಲ್ಗಾಮ್ ಉಗ್ರ ದಾಳಿಯ ವಿಚಾರದಲ್ಲಿ BRICS ರಾಷ್ಟ್ರಗಳು ಇದೀಗ ಮಹತ್ವದ ಸಂದೇಶ ನೀಡಿವೆ! 2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರಾನ್ ಕಣಿವೆಯಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು BRICS ನಾಯಕರು ಅತ್ಯಂತ ಕಠಿಣ ಪದಗಳಲ್ಲಿ ಖಂಡಿಸಿದ್ದಾರೆ. ಈ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದರು.ದೇಶವನ್ನೇ ಬೆಚ್ಚಿಬೀಳಿಸಿದ್ದ ಈ ದಾಳಿಯ ಬಳಿಕ ಭಯೋತ್ಪಾದನೆ ವಿರುದ್ಧ ಮತ್ತೊಮ್ಮೆ ಕಠಿಣ ಕ್ರಮದ ಕೂಗು ಕೇಳಿಬಂದಿತ್ತು. ಇದೀಗ BRICS ಶೃಂಗಸಭೆಯಲ್ಲಿ ಅಂಗೀಕರಿಸಲಾದ 140 ಅಂಶಗಳ ‘ಹೊಸದಿಲ್ಲಿ ಘೋಷಣೆ’ಯ 40ನೇ ಅಂಶದಲ್ಲಿ ಪಹಲ್ಗಾಮ್ ದಾಳಿಯನ್ನು ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ. ದಾಳಿಯ ಹಿಂದಿನ ಉದ್ದೇಶ ಏನೇ ಇರಲಿ…ಅದನ್ನು ನಡೆಸಿದವರು ಯಾರೇ ಇರಲಿ…ಇಂತಹ ಭಯೋತ್ಪಾದಕ ಕೃತ್ಯಗಳು ಅಪರಾಧ ಮತ್ತು ಯಾವುದೇ ಕಾರಣಕ್ಕೂ ಸಮರ್ಥಿಸಲಾಗದವು ಎಂದು BRICS ನಾಯಕರು ಸ್ಪಷ್ಟಪಡಿಸಿದ್ದಾರೆ. ಇದರ ಜೊತೆಗೆ, ಭಯೋತ್ಪಾದನೆಯನ್ನು ಅದರ ಎಲ್ಲಾ ರೂಪಗಳಲ್ಲೂ ಎದುರಿಸುವ ಬದ್ಧತೆಯನ್ನು ನಾಯಕರು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಭಯೋತ್ಪಾದನೆ ವಿರುದ್ಧ ‘ಶೂನ್ಯ ಸಹಿಷ್ಣುತೆ’ ತೋರಿಸಬೇಕು ಎಂಬುದು BRICS ರಾಷ್ಟ್ರಗಳ…

Read More

ಬಿಗ್‌ಬಾಸ್ ಮನೆಯಲ್ಲಿ ಶುರುವಾಯ್ತು ಅಸಲಿ ಆಟ..! ಮಂಜು-ಗಗನ್ ನಡುವೆ ಯಾರು ಹೀರೋ, ಯಾರು ವಿಲನ್? ಬಿಗ್‌ಬಾಸ್ ಕನ್ನಡ ಸೀಸನ್ 13ರ ಮೊದಲ ವಾರವೇ ಸ್ಪರ್ಧಿಗಳ ನಡುವಿನ ಭಿನ್ನಾಭಿಪ್ರಾಯಕ್ಕೆ ವೇದಿಕೆಯಾಗಿದೆ. ಟಾಸ್ಕ್‌ಗಳಿಗಿಂತಲೂ ಇದೀಗ ಮಾತಿನ ಸಮರ, ಟಾರ್ಗೆಟಿಂಗ್ ಮತ್ತು ಗ್ರೂಪಿಸಂ ಆರೋಪಗಳು ಹೆಚ್ಚು ಸದ್ದು ಮಾಡುತ್ತಿವೆ. ಈ ನಡುವೆ ಮಂಜುನಾಥ್ ಹಾಗೂ ಗಗನ್ ಇಬ್ಬರೂ ಮನೆಯೊಳಗೆ ಪ್ರಮುಖ ಚರ್ಚೆಯ ವಿಷಯವಾಗಿದ್ದಾರೆ. ಆದರೆ ಇಬ್ಬರ ಆಟದ ಶೈಲಿ ಮಾತ್ರ ಸಂಪೂರ್ಣ ವಿಭಿನ್ನ. ಮಂಜುನಾಥ್ ಅವರ ನೇರ ಮಾತುಗಳು ಕೆಲವರಿಗೆ ಕಿರಿಕಿರಿ ಎನಿಸುತ್ತಿದ್ದರೆ, ಇನ್ನೂ ಕೆಲವರು ಇದೇ ಆಟದ ಶೈಲಿಯನ್ನು ಮೆಚ್ಚಿಕೊಂಡಿದ್ದಾರೆ. ಮನೆಯ ಬಹುತೇಕ ಸ್ಪರ್ಧಿಗಳು ಡಿಪಾರ್ಚರ್‌ ಪಟ್ಟಿಗೆ ಮಂಜುನಾಥ್ ಹೆಸರನ್ನು ಸೂಚಿಸಿದಾಗ, ಅವರು ಅದನ್ನೇ ಸವಾಲಾಗಿ ಸ್ವೀಕರಿಸಿ ಇಡೀ ಮನೆಯ ವಿರುದ್ಧ ತಿರುಗಿಬಿದ್ದಿದ್ದಾರೆ. ಮತ್ತೊಂದೆಡೆ ಗಗನ್ ಕೂಡ ಒಂದರ ಹಿಂದೆ ಒಂದರಂತೆ ವಿವಾದಕ್ಕೆ ಸಿಲುಕುತ್ತಿದ್ದಾರೆ. ಆಸಿಯಾ ಜೊತೆಗಿನ ಜಗಳದ ಬೆನ್ನಲ್ಲೇ ಇದೀಗ ಕಾವ್ಯಾ ಗೌಡ ಜೊತೆಗೂ ಮಾತಿನ ಚಕಮಕಿ ನಡೆದಿದೆ. ಮನೆಯ ಸ್ವಚ್ಛತೆ ವಿಚಾರವಾಗಿ…

Read More

ಸಿದ್ದರಾಮಯ್ಯ ಚುನಾವಣಾ ನಿವೃತ್ತಿ ಹೇಳಿಕೆ; ರಾಹುಲ್ ಗಾಂಧಿಯಿಂದ ಮಹತ್ವದ ಸಲಹೆ! 2028ರ ವಿಧಾನಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ರಾಜ್ಯ ಕಾಂಗ್ರೆಸ್‌ನಲ್ಲಿ ಮಾತ್ರವಲ್ಲ, ರಾಜ್ಯ ರಾಜಕೀಯದಲ್ಲೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕ ರಾಹುಲ್ ಗಾಂಧಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರಂತಹ ಅನುಭವಿ ನಾಯಕರು ಪಕ್ಷಕ್ಕೆ ಅಗತ್ಯವಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬಂತಹ ಹೇಳಿಕೆಗಳು ಪಕ್ಷದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಇಂತಹ ಹೇಳಿಕೆಗಳನ್ನು ನೀಡದಿರುವುದು ಸೂಕ್ತ ಎಂದು ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ರಾಹುಲ್ ಮುಂದೆ ಸಿದ್ದರಾಮಯ್ಯ ಸ್ಪಷ್ಟನೆ ಇದಕ್ಕೆ ಪ್ರತಿಕ್ರಿಯೆಯಾಗಿ ಸಿದ್ದರಾಮಯ್ಯ ಕೂಡ ತಮ್ಮ ಹೇಳಿಕೆಯ ಹಿಂದಿನ ಉದ್ದೇಶವನ್ನು ರಾಹುಲ್ ಗಾಂಧಿ ಅವರಿಗೆ ವಿವರಿಸಿದ್ದಾರೆ ಎನ್ನಲಾಗಿದೆ. ತಾವು ಸಂಪೂರ್ಣ ರಾಜಕೀಯದಿಂದ ಹಿಂದೆ ಸರಿಯುವ ಬಗ್ಗೆ ಮಾತನಾಡಿಲ್ಲ. ಬದಲಾಗಿ, ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸದಿರುವ ನಿರ್ಧಾರದ ಬಗ್ಗೆ ಮಾತ್ರ ಹೇಳಿದ್ದಾಗಿ…

Read More

Gold Silver Rate Today: ಚಿನ್ನ ಖರೀದಿಸಲು ಯೋಚಿಸುತ್ತಿರುವವರಿಗೆ ಇಂದಿನ ಮಾರುಕಟ್ಟೆ ದರದಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ. ಕಳೆದ ಕೆಲವು ದಿನಗಳಿಂದ ಬಂಗಾರದ ಬೆಲೆ ನಿರಂತರ ಏರಿಳಿತ ಕಾಣುತ್ತಿದ್ದು, ಇದೀಗ ಸೆಪ್ಟೆಂಬರ್ 10ರಂದು ಮತ್ತೆ ಬೆಲೆ ಏರಿಕೆಯಾಗಿದೆ. ಚಿನ್ನದ ಜತೆಗೆ ಬೆಳ್ಳಿಯ ದರದಲ್ಲೂ ಹೆಚ್ಚಳವಾಗಿರುವುದು ಗಮನಾರ್ಹವಾಗಿದೆ. ಇಂದಿನ ಮಾರುಕಟ್ಟೆ ದರದ ಪ್ರಕಾರ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹14,255ಕ್ಕೆ ತಲುಪಿದೆ. 24 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ ₹15,551ರಷ್ಟಿದೆ. ಇದೇ ವೇಳೆ ಬೆಳ್ಳಿ ಬೆಲೆಯಲ್ಲೂ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಒಂದು ಗ್ರಾಂ ಬೆಳ್ಳಿಗೆ ₹255 ದರ ಇದೆ. 10 ಗ್ರಾಂ ಚಿನ್ನದ ಬೆಲೆ ಎಷ್ಟು? ಇಂದಿನ ದರವನ್ನು 10 ಗ್ರಾಂ ಲೆಕ್ಕದಲ್ಲಿ ನೋಡಿದರೆ, 22 ಕ್ಯಾರಟ್ ಚಿನ್ನಕ್ಕೆ ಸುಮಾರು ₹1,42,550 ಪಾವತಿಸಬೇಕಾಗುತ್ತದೆ. 24 ಕ್ಯಾರಟ್ ಶುದ್ಧ ಚಿನ್ನದ 10 ಗ್ರಾಂ ದರ ಸುಮಾರು ₹1,55,110 ಆಗಿದೆ. ಇತ್ತೀಚಿನ ದರಕ್ಕೆ ಹೋಲಿಸಿದರೆ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ ₹110ರಷ್ಟು ಏರಿಕೆ ದಾಖಲಾಗಿದೆ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಚಿನ್ನ ಖರೀದಿಸುವವರಿಗೆ ಈ ಏರಿಕೆ ಒಟ್ಟು…

Read More

ನವದೆಹಲಿ: ವಿಜಯ್ ಮಲ್ಯ ಮತ್ತೆ ಸುದ್ದಿಯಲ್ಲಿದ್ದಾರೆ! ತಮ್ಮನ್ನು ಪದೇ ಪದೇ ‘ದೇಶಭ್ರಷ್ಟ’, ‘ಪರಾರಿ’ ಹಾಗೂ ‘ವಂಚಕ’ ಎಂದು ಕರೆಯುತ್ತಿರುವುದಕ್ಕೆ ಉದ್ಯಮಿ ವಿಜಯ್ ಮಲ್ಯ ಮತ್ತೊಮ್ಮೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಲಂಡನ್‌ನಲ್ಲಿ ವಾಸಿಸುತ್ತಿರುವ ಮಲ್ಯ, ತಾವು ಭಾರತದಿಂದ ಪರಾರಿಯಾಗಿಲ್ಲ ಎಂದು ಹೇಳಿಕೊಂಡಿದ್ದು, ಇಂಗ್ಲೆಂಡ್ ಬಿಟ್ಟು ಹೊರಹೋಗಲು ತಮ್ಮ ಮೇಲೆ ಕಾನೂನಿನ ನಿರ್ಬಂಧವಿದೆ. ಇದೇ ಕಾರಣಕ್ಕೆ ಭಾರತಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಷ್ಟೇ ಅಲ್ಲ, ತಮ್ಮ ವಿರುದ್ಧದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಸೂಲಾತಿ ಹಾಗೂ ಆಸ್ತಿ ಜಪ್ತಿ ವಿಚಾರವನ್ನು ಪ್ರಸ್ತಾಪಿಸಿರುವ ಮಲ್ಯ, ಇದೀಗ ‘ನಾನು ಬ್ಯಾಂಕ್‌ಗಳಿಗೆ ವಂಚಕನೇ?’ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ. ಹಾಗಾದರೆ ವಿಜಯ್ ಮಲ್ಯ ಇದೀಗ ಹೇಳಿದ್ದೇನು? ಅವರು ಯಾವ ದಾಖಲೆಗಳನ್ನು ಉಲ್ಲೇಖಿಸಿದ್ದಾರೆ? ಭಾರತ ಸರ್ಕಾರ ಹಾಗೂ ಜಾರಿ ನಿರ್ದೇಶನಾಲಯದ ವಿರುದ್ಧ ಮಲ್ಯ ಮಾಡಿರುವ ಆರೋಪಗಳೇನು? ಎಲ್ಲವನ್ನೂ ಒಂದೊಂದಾಗಿ ನೋಡೋಣ. ವಿಜಯ್ ಮಲ್ಯ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸರಣಿ ಪೋಸ್ಟ್‌ಗಳನ್ನು ಹಾಕುವ ಮೂಲಕ ತಮ್ಮ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ. ಮೊದಲಿಗೆ, ತಮ್ಮನ್ನು ‘ಭಾರತಕ್ಕೆ ಮರಳಲು ನಿರಾಕರಿಸುತ್ತಿರುವ…

Read More

ಭಾರತೀಯ ಕ್ರಿಕೆಟ್‌ನಲ್ಲಿ ಯುವ ಆಟಗಾರರಿಗೆ ಮತ್ತೊಂದು ದೊಡ್ಡ ಅವಕಾಶ ಸಿಕ್ಕಿದೆ. ಆಸ್ಟ್ರೇಲಿಯಾ ಎ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, ಈ ಸರಣಿಗಾಗಿ ಭಾರತ ಎ ತಂಡಗಳನ್ನು ಪ್ರಕಟಿಸಲಾಗಿದೆ. ವಿಶೇಷ ಅಂದರೆ, ಬಹುದಿನಗಳ ಪಂದ್ಯಗಳ ತಂಡದ ನಾಯಕತ್ವವನ್ನು ಕನ್ನಡಿಗ ದೇವದತ್ ಪಡಿಕ್ಕಲ್ ಅವರಿಗೆ ವಹಿಸಲಾಗಿದೆ. ಇನ್ನು ಏಕದಿನ ಸರಣಿಯಲ್ಲಿ ರುತುರಾಜ್ ಗಾಯಕ್ವಾಡ್ ತಂಡದ ನಾಯಕನಾಗಿದ್ದರೆ, ದೇವದತ್ ಪಡಿಕ್ಕಲ್ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ. ಹಾಗಾದರೆ ಈ ಸರಣಿಯಲ್ಲಿ ಯಾರಿಗೆಲ್ಲ ಅವಕಾಶ ಸಿಕ್ಕಿದೆ? ದೇವದತ್ ಪಡಿಕ್ಕಲ್‌ಗೆ ನಾಯಕತ್ವ ನೀಡಿರುವುದರ ಹಿಂದಿನ ಕಾರಣವೇನು? ರುತುರಾಜ್ ಗಾಯಕ್ವಾಡ್ ಯಾವ ತಂಡವನ್ನು ಮುನ್ನಡೆಸಲಿದ್ದಾರೆ? ಈ ಸರಣಿಯಲ್ಲಿ ಟೀಂ ಇಂಡಿಯಾದ ಭವಿಷ್ಯದ ತಾರೆಗಳು ಯಾರು? ಸಂಪೂರ್ಣ ಮಾಹಿತಿ ಇಲ್ಲಿದೆ. ಆಸ್ಟ್ರೇಲಿಯಾ ಎ ತಂಡದ ಭಾರತ ಪ್ರವಾಸ ಸೆಪ್ಟೆಂಬರ್ 22ರಿಂದ ಆರಂಭವಾಗಲಿದೆ. ಈ ಪ್ರವಾಸದಲ್ಲಿ ಎರಡು ವಿಭಿನ್ನ ಮಾದರಿಯ ಸರಣಿಗಳು ನಡೆಯಲಿವೆ. ಮೊದಲನೆಯದಾಗಿ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಇದರ ಜೊತೆಗೆ ಎರಡು ನಾಲ್ಕು ದಿನಗಳ ಬಹುದಿನಗಳ ಪಂದ್ಯಗಳ ಸರಣಿಯೂ…

Read More

ಕರ್ನಾಟಕದ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು 2026ರ ಜೂನ್ 3ರಂದು ಅಧಿಕಾರ ಸ್ವೀಕರಿಸಿದ ಬಳಿಕ, ಆಡಳಿತದ ಮೊದಲ ಹಂತದಲ್ಲೇ ವಿದ್ಯಾರ್ಥಿಗಳು, ಯುವಜನತೆ, ರೈತರು, ಸರ್ಕಾರಿ ನೌಕರರು, ನಿರುದ್ಯೋಗಿಗಳ ಸಮಸ್ಯೆ ಹಾಗೂ ಬೆಂಗಳೂರಿನ ಮೂಲಸೌಕರ್ಯಕ್ಕೆ ಒತ್ತು ನೀಡುವ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ ಅಧಿಕಾರ ಸ್ವೀಕರಿಸಿದ ಮೊದಲ ಸಚಿವ ಸಂಪುಟ ಸಭೆಯಲ್ಲೇ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಸರ್ಕಾರಿ ನಾನ್-ಲಕ್ಸುರಿ ಬಸ್‌ಗಳಲ್ಲಿ ಉಚಿತ ಪ್ರಯಾಣ, ಖಾಸಗಿ ವಲಯದ ಉದ್ಯೋಗಾವಕಾಶಗಳನ್ನು ಒದಗಿಸುವ ಉದ್ಯೋಗ ವಿನಿಮಯ ವ್ಯವಸ್ಥೆ, ರಾಜ್ಯಾದ್ಯಂತ 10 ಸಾವಿರ ಯುವ ಸಂಘಗಳ ಸ್ಥಾಪನೆ ಹಾಗೂ ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ ₹2 ಸಾವಿರ ಕೋಟಿ ಸೇರಿದಂತೆ ಹಲವು ನಿರ್ಧಾರಗಳನ್ನು ಪ್ರಕಟಿಸುವ ಮೂಲಕ ಶಿವಕುಮಾರ್ ಸರ್ಕಾರ ತನ್ನ ಆದ್ಯತೆಗಳನ್ನು ಸ್ಪಷ್ಟಪಡಿಸಿತು. ಅಧಿಕಾರ ಸ್ವೀಕರಿಸಿದ ಮೊದಲ ಸಚಿವ ಸಂಪುಟ ಸಭೆಯಲ್ಲೇ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಸರ್ಕಾರಿ ನಾನ್-ಲಕ್ಸುರಿ ಬಸ್‌ಗಳಲ್ಲಿ ಉಚಿತ ಪ್ರಯಾಣ, ಖಾಸಗಿ ವಲಯದ ಉದ್ಯೋಗಾವಕಾಶಗಳನ್ನು ಒದಗಿಸುವ ಉದ್ಯೋಗ ವಿನಿಮಯ ವ್ಯವಸ್ಥೆ, ರಾಜ್ಯಾದ್ಯಂತ 10 ಸಾವಿರ ಯುವ ಸಂಘಗಳ…

Read More

ಸಾಹುಕಾರ್ ಗೆ ED ಡ್ರಿಲ್…! ಸಚಿವ ಸತೀಶ್ ಜಾರಕಿಹೊಳಿಗೆ ಬೆಳ್ಳಂ ಬೆಳ್ಳಗೆ ED ಅಧಿಕಾರಿಗಳು ಶಾಕ್ ನೀಡಿದ್ದಾರೆ.ಮುಂಜಾನೆ 7 ಗಂಟೆಯ ಸುಮಾರಿಗೆ ಸತೀಶ್ ಅವರ ನಿವಾಸದ ಮೇಲೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು ಸತೀಶ್ ಜಾರಕಿಹೊಳಿಗೆ ಸಂಭಂದಿಸಿದ ಸ್ಥಳಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಆಪ್ತ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತರಾಗಿದ್ದ ಮಂಜುನಾಥ್ ಮೇಲೆ ಇತ್ತೀಚೆಗಷ್ಟೇ ಬಾರ್ ಲೈಸೆನ್ಸ್ ವಿಚಾರವಾಗಿ ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು,ಈ ಸಂಬಂದಿ ಮಂಜುನಾಥ್ ಸೇರಿದಂತೆ ಹಲವು ಆಪ್ತರ ನಿವಾಸದ ಮೇಲೆ ED ಅಧಿಕಾರಿಗಳು ರೈಡ್ ಮಾಡಿದ್ದರು. ಈ ದಾಳಿ ವೇಳೆ ಆರೋಪಿ ಮಂಜುನಾಥ್ ನಿವಾಸದಲ್ಲಿ ಅನೇಕ ಬೇನಾಮಿ ಬಾರ್ ಲೈಸೆನ್ಸ್ ಜೊತೆಗೆ 5.5 ಲಕ್ಷ ಹಣ ಸೇರಿ 13.3 ಕೋ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿತ್ತು. ಇದೀಗ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ED ಅಧಿಕಾರಿಗಳು ಇದ್ದಕ್ಕಿದ್ದಂತೆ ರೈಡ್ ಮಾಡಿದ್ದು ಡಾಲರ್ಸ್ ಕಾಲೋನಿ ಸೇರಿ 12 ಕ್ಕಿಂತ ಅಧಿಕ ಸ್ಥಳಗಳಲ್ಲಿ ಸುಮಾರು 20…

Read More