ರಾಷ್ಟ್ರಪತಿಗಳ ಜೊತೆ ಸದಾ ಕಾಣಿಸಿಕೊಳ್ಳುವ ಮಿಲಿಟರಿ ಅಧಿಕಾರಿಗಳನ್ನು ನೋಡಿದಾಗ, ಇವರ ಜವಾಬ್ದಾರಿ ಏನು? ಇಷ್ಟು ಮಹತ್ವದ ಹುದ್ದೆಗೆ ಇವರ ಆಯ್ಕೆ ಹೇಗೆ ನಡೆಯುತ್ತದೆ? ಎಂಬ ಕುತೂಹಲ ಮೂಡುವುದು ಸಹಜ. ರಾಷ್ಟ್ರಪತಿಗಳ Aide-de-Camp (ADC) ಹುದ್ದೆ ಸಾಮಾನ್ಯ ಸರ್ಕಾರಿ ಹುದ್ದೆಯಲ್ಲ. ಭಾರತೀಯ ಸೇನೆ, ನೌಕಾಪಡೆ ಅಥವಾ ವಾಯುಪಡೆಯ ಸೇವೆಯಲ್ಲಿರುವ ಅರ್ಹ ಅಧಿಕಾರಿಗಳಲ್ಲಿಂದಲೇ ಆಯ್ಕೆ ನಡೆಯುತ್ತದೆ. ಉತ್ತಮ ಸೇವಾ ದಾಖಲೆ, ದೈಹಿಕ ಸಾಮರ್ಥ್ಯ, ವೃತ್ತಿಪರ ನಡವಳಿಕೆ ಹಾಗೂ ವಿವಿಧ ಹಂತದ ಮೌಲ್ಯಮಾಪನಗಳು ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಮುಖವಾಗುತ್ತವೆ.ಈ ಹುದ್ದೆಗೆ ಆಯ್ಕೆಯಾಗುವುದು ಮಾತ್ರವಲ್ಲ, ರಾಷ್ಟ್ರಪತಿಗಳೊಂದಿಗೆ ಕೆಲಸ ಮಾಡುವ ಸಂದರ್ಭದಲ್ಲಿ ಅತ್ಯಂತ ಶಿಸ್ತು, ಸಮಯಪ್ರಜ್ಞೆ, ಪ್ರೋಟೋಕಾಲ್ ಜ್ಞಾನ ಮತ್ತು ಸದಾ ಸಿದ್ಧರಾಗಿರುವ ಮನೋಭಾವ ಅಗತ್ಯವಾಗುತ್ತದೆ.ಮಾಜಿ ರಾಷ್ಟ್ರಪತಿ ADC ಆಗಿ ಸೇವೆ ಸಲ್ಲಿಸಿದ್ದ ಮೇಜರ್ ರಿಷಭ್ ಸಿಂಗ್ ಸಂಬ್ಯಾಲ್ ಅವರು ರಾಜ್ ಶಮಾನಿ ಅವರ ಸಂದರ್ಶನದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡ ಬಳಿಕ ADC ಹುದ್ದೆಯ ಆಯ್ಕೆ ಪ್ರಕ್ರಿಯೆ ಮತ್ತೊಮ್ಮೆ ಚರ್ಚೆಗೆ ಬಂದಿದೆ.ವರದಿಗಳ ಪ್ರಕಾರ, ಆಯ್ಕೆ ಪ್ರಕ್ರಿಯೆಯಲ್ಲಿ ಅಧಿಕಾರಿಗಳ ಸಾಮಾನ್ಯ ಜ್ಞಾನ,…
Author: praveen
ಪಿಂಚಣಿ ಪಡೆಯುವ ನೌಕರರಿಗೆ ಸುಪ್ರೀಂ ಕೋರ್ಟ್ ಮಹತ್ವದ ರಿಲೀಫ್ ನೀಡಿದೆ. ದೀರ್ಘಕಾಲ ನಿರಂತರವಾಗಿ ಸೇವೆ ಸಲ್ಲಿಸಿ ಬಳಿಕ ಕಾಯಂಗೊಂಡಿರುವ ನೌಕರರಿಗೆ ಕೇವಲ ತಾಂತ್ರಿಕ ಅಥವಾ ಆಡಳಿತಾತ್ಮಕ ಕಾರಣಗಳನ್ನು ಮುಂದಿಟ್ಟುಕೊಂಡು ಪಿಂಚಣಿ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ನೌಕರರ ಹಿಂದಿನ ಸೇವೆಯನ್ನೂ ಪಿಂಚಣಿ ಲೆಕ್ಕಾಚಾರದಲ್ಲಿ ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಗುತ್ತಿಗೆ, ತಾತ್ಕಾಲಿಕ ಅಥವಾ ದಿನಗೂಲಿ ನೌಕರರಾಗಿ ಕೆಲಸ ಮಾಡಿದ ಅವಧಿಯ ನಂತರ ಸೇವೆ ಕಾಯಂಗೊಂಡಿದ್ದರೆ, ಆ ಸೇವಾ ಅವಧಿಯನ್ನೂ ಪಿಂಚಣಿಗೆ ಅರ್ಹ ಸೇವೆಯಾಗಿ ಪರಿಗಣಿಸಬಹುದು ಎಂದು ಪೀಠ ತಿಳಿಸಿದೆ. ಕೆಲವು ದಿನಗಳ ಸೇವಾ ವಿರಾಮ ಕೃತಕವಾಗಿ ಅಥವಾ ಆಡಳಿತಾತ್ಮಕ ಕಾರಣಗಳಿಂದ ಉಂಟಾಗಿದ್ದರೆ, ಅದನ್ನು ಮಾತ್ರ ಕಾರಣವನ್ನಾಗಿ ಮಾಡಿಕೊಂಡು ಪಿಂಚಣಿ ಸೌಲಭ್ಯದಿಂದ ನೌಕರರನ್ನು ಹೊರಗಿಡಬಾರದು ಎಂದಿದೆ. ಪಿಂಚಣಿ ಅನುಕಂಪದ ಹಣವಲ್ಲ; ನೌಕರರು ಸಲ್ಲಿಸಿದ ಸೇವೆಗೆ ದೊರೆಯುವ ಪ್ರತಿಫಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ತೀರ್ಪಿನ ಮೂಲಕ ಪಂಜಾಬ್ ಶಾಲಾ ಶಿಕ್ಷಣ ಮಂಡಳಿಯ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯ…
ಭಾರತೀಯ ಮಹಿಳಾ ಕ್ರಿಕೆಟ್ ತಂಡ ಮತ್ತೊಮ್ಮೆ ಏಷ್ಯಾದಲ್ಲಿ ತನ್ನ ಸಾಮ್ರಾಜ್ಯ ಮುಂದುವರಿಸಿದೆ! 2026ರ ಮಹಿಳಾ ಏಷ್ಯಾ ಕಪ್ ಫೈನಲ್‌ನಲ್ಲಿ ಶ್ರೀಲಂಕಾವನ್ನು 72 ರನ್‌ಗಳಿಂದ ಮಣಿಸಿದ ಟೀಂ ಇಂಡಿಯಾ, ದಾಖಲೆಯ 8ನೇ ಬಾರಿಗೆ ಏಷ್ಯಾ ಕಪ್ ಟ್ರೋಫಿ ತನ್ನದಾಗಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 183 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಭಾರತದ ಪರ ಆರಂಭಿಕರಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನಾ ಅಬ್ಬರಿಸಿದರು. ಇಬ್ಬರೂ ಮೊದಲ ವಿಕೆಟ್‌ಗೆ ಬರೋಬ್ಬರಿ 129 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಭದ್ರ ಅಡಿಪಾಯ ಹಾಕಿದರು. ಶಫಾಲಿ ಕೇವಲ 39 ಎಸೆತಗಳಲ್ಲಿ 68 ರನ್ ಸಿಡಿಸಿದರೆ, ಸ್ಮೃತಿ ಮಂಧಾನಾ 59 ರನ್‌ಗಳ ಕೊಡುಗೆ ನೀಡಿದರು. 184 ರನ್‌ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಿಸಿ ಕೇವಲ 111 ರನ್‌ಗಳಿಗೆ ಆಲೌಟ್ ಆಯಿತು. ಶ್ರೀ ಚರಣಿ 4 ವಿಕೆಟ್, ದೀಪ್ತಿ ಶರ್ಮಾ 3 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ…
ಮೈಸೂರು ದಸರಾ ಮಹೋತ್ಸವಕ್ಕೆ ಸಜ್ಜಾಗುತ್ತಿರುವ ಗಜಪಡೆಯ ಆನೆಗಳ ತೂಕದ ವಿವರ ಹೊರಬಿದ್ದಿದೆ. ಎರಡನೇ ತಂಡದಲ್ಲಿ ಮೈಸೂರಿಗೆ ಆಗಮಿಸಿರುವ ಸುಗ್ರೀವ ಆನೆ ಬರೋಬ್ಬರಿ 5,850 ಕೆ.ಜಿ. ತೂಕ ಹೊಂದಿರುವುದು ವಿಶೇಷ ಗಮನ ಸೆಳೆದಿದೆ. ಇದರೊಂದಿಗೆ ದಸರಾ ಗಜಪಡೆಯಲ್ಲೇ ಅತಿ ಹೆಚ್ಚು ತೂಕ ಹೊಂದಿರುವ ಆನೆ ಎಂಬ ಹೆಗ್ಗಳಿಕೆಗೆ ಸುಗ್ರೀವ ಪಾತ್ರನಾಗಿದ್ದಾನೆ. ಇದಕ್ಕೂ ಮೊದಲು ಮೊದಲ ತಂಡದಲ್ಲಿ ಆಗಮಿಸಿದ್ದ ಶ್ರೀಕಂಠ ಆನೆ 5,770 ಕೆ.ಜಿ. ತೂಕ ಹೊಂದುವ ಮೂಲಕ ಗಜಪಡೆಯ ಭಾರೀ ಆನೆ ಎನಿಸಿಕೊಂಡಿತ್ತು. ಆದರೆ ಇದೀಗ ಸುಗ್ರೀವ ಶ್ರೀಕಂಠನಿಗಿಂತ 80 ಕೆ.ಜಿ. ಹೆಚ್ಚು ತೂಕ ಹೊಂದುವ ಮೂಲಕ ಮೊದಲ ಸ್ಥಾನಕ್ಕೇರಿದ್ದಾನೆ. ಇನ್ನು ಎರಡನೇ ತಂಡದಲ್ಲಿರುವ ಚೈತ್ರ ಆನೆ 3,295 ಕೆ.ಜಿ. ಹಾಗೂ ರೂಪಾ ಆನೆ 3,260 ಕೆ.ಜಿ. ತೂಕ ಹೊಂದಿವೆ. ಅಂದಹಾಗೆ, ಮೈಸೂರು ದಸರಾ ಜಂಬೂಸವಾರಿಯಲ್ಲಿ ಆನೆಗಳ ಭವ್ಯ ಹೆಜ್ಜೆ ನೋಡಲು ಜನ ಕಾತರರಾಗಿದ್ದಾರೆ. ಈ ಬಾರಿಯ ದಸರಾ ಗಜಪಡೆಯ ಪ್ರಮುಖ ಆಕರ್ಷಣೆಯಾಗಿರುವ ಸುಗ್ರೀವ ತನ್ನ ಭಾರೀ ತೂಕದ ಮೂಲಕವೇ ಈಗ ಎಲ್ಲರ…
ಸಿನಿಮಾ ಬೇರೆ.. ಸ್ನೇಹ ಒಂದೇ! ವಿಜಯ್–ಅಜಿತ್ ಭೇಟಿಗೆ ಫ್ಯಾನ್ಸ್ ಫಿದಾ ಕಾಲಿವುಡ್‌ನಲ್ಲಿ ವರ್ಷಗಳಿಂದ ದೊಡ್ಡ ಅಭಿಮಾನಿ ಬಳಗ ಹೊಂದಿರುವ ವಿಜಯ್ ಮತ್ತು ಅಜಿತ್ ಕುಮಾರ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಕಾರಣ ಸಿನಿಮಾ ಅಲ್ಲ… ಒಂದು ರೇಸಿಂಗ್ ಟ್ರ್ಯಾಕ್‌ನಲ್ಲಿ ನಡೆದ ಅಪರೂಪದ ಸ್ನೇಹದ ಕ್ಷಣ! ಬ್ರಿಟನ್‌ನ ಸಿಲ್ವರ್‌ಸ್ಟೋನ್‌ನಲ್ಲಿ ಅಜಿತ್ ಕುಮಾರ್ ರೇಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದ ವೇಳೆ, ಅವರನ್ನು ಹುರಿದುಂಬಿಸಲು ವಿಜಯ್ ಅಲ್ಲಿಗೆ ಭೇಟಿ ನೀಡಿದ್ದಾರೆ. ಅಜಿತ್ ಅವರನ್ನು ಕಂಡ ತಕ್ಷಣ ವಿಜಯ್ ತೋರಿದ ಆತ್ಮೀಯತೆ ಅಭಿಮಾನಿಗಳ ಗಮನ ಸೆಳೆದಿದೆ. ಇಬ್ಬರು ಸ್ಟಾರ್‌ಗಳು ಪರಸ್ಪರ ಅಪ್ಪಿಕೊಂಡು ಮಾತನಾಡಿಕೊಂಡ ದೃಶ್ಯಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇದಾದ ಬಳಿಕ ಇಬ್ಬರೂ ಪರಸ್ಪರ ವಿಶೇಷ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಅಜಿತ್‌ಗಾಗಿ ವಿಜಯ್ ನೀಡಿದ ರೇಸಿಂಗ್ ಕಾರಿನ ಮಾದರಿಯ ಗಿಫ್ಟ್ ಮಾತ್ರವಲ್ಲ, ಅದರ ಮೇಲಿನ ಪ್ರೀತಿಯ ಸಂದೇಶವೂ ಇದೀಗ ಚರ್ಚೆಗೆ ಕಾರಣವಾಗಿದೆ. ಇನ್ನೊಂದೆಡೆ, ವಿಜಯ್‌ಗೆ ಅಜಿತ್ ಕೂಡ ರೇಸಿಂಗ್ ಹೆಲ್ಮೆಟ್ ಉಡುಗೊರೆಯಾಗಿ…
ಬೆಂಗಳೂರಿನ ಪಾಲಿಕೆ ಆಸ್ತಿಗಳ ನಿರ್ವಹಣೆಯಲ್ಲೇ ಈಗ ದೊಡ್ಡ ಪ್ರಶ್ನೆ ಎದುರಾಗಿದೆ! ಬೆಂಗಳೂರಿನ ಪಾಲಿಕೆ ಆಸ್ತಿಗಳ ಗುತ್ತಿಗೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಗುತ್ತಿಗೆ ಅವಧಿ ಮುಗಿದ ಬಳಿಕವೂ ಕೆಲವು ಪಾಲಿಕೆ ಆಸ್ತಿಗಳನ್ನು ವಾಪಸ್ ಪಡೆಯದಿರುವುದು ಹಾಗೂ ಬಾಡಿಗೆ ವಸೂಲಾತಿ ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ಕುರಿತು 2026ರ ವಿಧಾನ ಪರಿಷತ್ ಪ್ರಶ್ನೆಯಲ್ಲೂ ಗುತ್ತಿಗೆ ಮುಗಿದಿರುವ ಪಾಲಿಕೆ ಆಸ್ತಿಗಳು ಮತ್ತು ಬಾಕಿ ಬಾಡಿಗೆ ವಸೂಲಾತಿ ಬಗ್ಗೆ ಮಾಹಿತಿ ಕೇಳಲಾಗಿದೆ. ಹಲವು ವರ್ಷಗಳಿಂದ ಹಳೆಯ ಗುತ್ತಿಗೆ ದರದಲ್ಲೇ ಆಸ್ತಿಗಳ ಬಳಕೆ ಮುಂದುವರಿದಿದ್ದರೆ, ಪಾಲಿಕೆಗೆ ಬರಬೇಕಾದ ಆದಾಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿರುವುದರಿಂದ ಕಾನೂನು ತೊಡಕುಗಳೂ ಇವೆ. ಹೀಗಾಗಿ ಗುತ್ತಿಗೆ ಅವಧಿ ಮುಗಿದ ಪ್ರತಿಯೊಂದು ಆಸ್ತಿಯ ಸ್ಥಿತಿಯನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ಆಸ್ತಿಯನ್ನು ವಾಪಸ್ ಪಡೆಯುವುದು ಅಥವಾ ಪ್ರಸ್ತುತ ಮಾರುಕಟ್ಟೆ ಮೌಲ್ಯಕ್ಕೆ ತಕ್ಕಂತೆ ಗುತ್ತಿಗೆ ನವೀಕರಿಸುವ ಅಗತ್ಯವಿದೆ. ಪಾಲಿಕೆ ಆಸ್ತಿಗಳಿಂದ ಬರುವ ಆದಾಯವನ್ನು ಹೆಚ್ಚಿಸಲು ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು…
ನಟ ಡಾಲಿ ಧನಂಜಯ್ ಹಾಗೂ ಧನ್ಯತಾ ದಂಪತಿ ತಮ್ಮ ಮಗನಿಗೆ ‘ಎರೆಯ’ ಎಂದು ನಾಮಕರಣ ಮಾಡಿರುವುದಾಗಿ ಗಣೇಶ ಚತುರ್ಥಿಯ ವಿಶೇಷ ದಿನದಂದು ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಗನ ಹೆಸರನ್ನು ವಿಭಿನ್ನವಾಗಿ ಪರಿಚಯಿಸಿರುವ ಡಾಲಿ ದಂಪತಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಕರ್ನಾಟಕದ ನಕ್ಷೆಯ ಮಧ್ಯಭಾಗದಲ್ಲಿ ಮಗನ ಹೆಸರು ಮೂಡುವಂತೆ ವಿಶೇಷವಾಗಿ ವಿನ್ಯಾಸಗೊಳಿಸಿದ ಡಾಲರ್ ಮೂಲಕ ತಮ್ಮ ಪುಟ್ಟ ಮಗನ ಹೆಸರನ್ನು ಡಾಲಿ ದಂಪತಿ ರಿವೀಲ್ ಮಾಡಿದ್ದಾರೆ. ಈ ಮೂಲಕ ಕನ್ನಡದ ನೆಲ-ನುಡಿಯೊಂದಿಗೆ ಹೆಸರನ್ನು ಬೆಸೆದಿರುವುದು ವಿಶೇಷ ಗಮನ ಸೆಳೆದಿದೆ. ‘ಎರೆಯ’ ಎಂಬ ಹೆಸರು ಕೂಡ ವಿಶೇಷ ಅರ್ಥವನ್ನು ಹೊಂದಿದೆ. ಎರೆಯ ಎಂದರೆ ಒಡೆಯ, ಅಧಿಪತಿ ಎಂಬ ಅರ್ಥವಿದೆ. ಇತಿಹಾಸದ ಉಲ್ಲೇಖಗಳಲ್ಲೂ ಇಮ್ಮಡಿ ಪುಲಕೇಶಿಯ ಬಾಲ್ಯದ ಹೆಸರು ‘ಎರೆಯ’ ಎಂದಿತ್ತು ಎನ್ನಲಾಗುತ್ತದೆ. ಹೀಗಾಗಿ ಪಾರಂಪರಿಕ ಹಿನ್ನೆಲೆ ಹೊಂದಿರುವ ಈ ಹೆಸರನ್ನು ಮಗನಿಗೆ ಆಯ್ಕೆ ಮಾಡಿರುವುದು ಕುತೂಹಲ ಮೂಡಿಸಿದೆ. ಮಗನ ಹೆಸರನ್ನು ಪರಿಚಯಿಸುವಾಗ ಡಾಲಿ ಧನಂಜಯ್ ಹಾಗೂ ಧನ್ಯತಾ, ತಮ್ಮ ಪುಟ್ಟ ಮಗನನ್ನು “ನಮ್ಮ…
ಯಶವಂತಪುರ ಎಪಿಎಂಸಿ ಯಾರ್ಡ್‌ನಲ್ಲಿ ಬಾಲಕಾರ್ಮಿಕರು ಪತ್ತೆಯಾದ ಬೆನ್ನಲ್ಲೇ ರಾಜ್ಯ ಸರ್ಕಾರ ಬಾಲಕಾರ್ಮಿಕ ಪದ್ಧತಿ ವಿರುದ್ಧ ಸಮರ ಸಾರಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆಯಂತೆ ರಾಜ್ಯಾದ್ಯಂತ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 16,951 ಸ್ಥಳಗಳನ್ನು ತಪಾಸಣೆ ನಡೆಸಿ ಸುಮಾರು 800 ಬಾಲಕಾರ್ಮಿಕರನ್ನು ರಕ್ಷಿಸಲಾಗಿದೆ. ರಾಜ್ಯದ 962 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಅಂಗಡಿಗಳು, ಗ್ಯಾರೇಜ್‌ಗಳು, ಹೋಟೆಲ್‌ಗಳು, ಕೈಗಾರಿಕಾ ಘಟಕಗಳು, ಮಾರುಕಟ್ಟೆಗಳು ಹಾಗೂ ವಿವಿಧ ವಾಣಿಜ್ಯ ಸಂಸ್ಥೆಗಳನ್ನು ಪರಿಶೀಲಿಸಲಾಗಿದೆ. ರಕ್ಷಿಸಲ್ಪಟ್ಟ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಹಾಗೂ ಸಂಬಂಧಪಟ್ಟ ಇಲಾಖೆಗಳ ಮುಂದೆ ಹಾಜರುಪಡಿಸಿ, ಅವರ ಸುರಕ್ಷತೆ ಮತ್ತು ಪುನರ್ವಸತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ ಒಂದೇ ದಿನ 503 ಮಕ್ಕಳು ರಕ್ಷಣೆ ರಾಜ್ಯದಲ್ಲೇ ಅತಿ ಹೆಚ್ಚು ಬಾಲಕಾರ್ಮಿಕರು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ನಗರದ 188 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 5,897 ಸ್ಥಳಗಳನ್ನು ಪರಿಶೀಲಿಸಲಾಗಿದ್ದು, 503 ಮಕ್ಕಳನ್ನು ರಕ್ಷಿಸಲಾಗಿದೆ. ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಆರೋಪದ ಮೇಲೆ 18 ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.…
ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಡುವಿನ ವಾಕ್ಸಮರ ಮತ್ತೊಂದು ಹಂತಕ್ಕೆ ತಲುಪಿದೆ. ಪೊಲೀಸ್ ಠಾಣೆಗೆ ನುಗ್ಗುವುದಾಗಿ ಪ್ರತಾಪ್ ಸಿಂಹ ನೀಡಿದ್ದ ಹೇಳಿಕೆಗೆ ಪ್ರದೀಪ್ ಈಶ್ವರ್ ಇದೀಗ ಖಾರವಾಗಿ ತಿರುಗೇಟು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರದೀಪ್ ಈಶ್ವರ್, “ನುಗ್ಗಿ ತೋರಿಸು, ನಾನು ನಿನ್ನನ್ನು ಚಾಲೆಂಜ್ ಮಾಡ್ತೀನಿ. ನಿನಗೆ ಪರಪ್ಪನ ಅಗ್ರಹಾರ ಗ್ಯಾರಂಟಿ” ಎಂದು ಸವಾಲು ಹಾಕಿದ್ದಾರೆ. ಅಷ್ಟೇ ಅಲ್ಲದೆ, “ತಾಕತ್ತಿದ್ದರೆ ಟ್ರೈ ಮಾಡು ಮಗ, ಆಲ್ ದಿ ಬೆಸ್ಟ್ ರಣಹೇಡಿ” ಎಂದು ವ್ಯಂಗ್ಯವಾಡಿದ್ದಾರೆ. ಅಷ್ಟಕ್ಕೂ ಈ ವಾಕ್ಸಮರಕ್ಕೆ ಕಾರಣವಾಗಿದ್ದು ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ನಡೆದ ಗಣೇಶೋತ್ಸವದ ಶಾಂತಿ ಸಭೆ. ಗಣೇಶ ಮೆರವಣಿಗೆ ವೇಳೆ ಪೊಲೀಸರು ಸೂಚಿಸುವ ಮಾರ್ಗವನ್ನೇ ಬಳಸಬೇಕು ಹಾಗೂ ಮಸೀದಿ ಮುಂದೆ ಮೆರವಣಿಗೆ ನಡೆಸುವುದು ಅಥವಾ ಪಟಾಕಿ ಸಿಡಿಸುವಂತಿಲ್ಲ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಸೂಚನೆ ನೀಡಿದ್ದರು. ಪೊಲೀಸ್ ಅಧಿಕಾರಿಯ ಈ ಹೇಳಿಕೆಗೆ ಪ್ರತಾಪ್ ಸಿಂಹ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.…
ಭಾರತ–ಅಫ್ಗಾನಿಸ್ತಾನ T20 ಸರಣಿಯ ಮೊದಲ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ!ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಟೀಂ ಇಂಡಿಯಾ ಕಣಕ್ಕಿಳಿಯಲಿದ್ದು, ಮೊದಲ ಪಂದ್ಯದಲ್ಲೇ ದೊಡ್ಡ ಆಯ್ಕೆ ಸವಾಲು ಎದುರಾಗಿದೆ. ಅದೇನಂದ್ರೆ…15 ವರ್ಷದ ವೈಭವ್ ಸೂರ್ಯವಂಶಿಗೆ ಅವಕಾಶ ಕೊಡಬೇಕಾ? ಅಥವಾ ಅನುಭವಿ ಸಂಜು ಸ್ಯಾಮ್ಸನ್‌ಗೆ ಓಪನಿಂಗ್ ನೀಡಬೇಕಾ? ಅಭಿಷೇಕ್ ಶರ್ಮಾ ಜೊತೆ ಸಂಜು ಸ್ಯಾಮ್ಸನ್ ಈಗಾಗಲೇ ಉತ್ತಮ ಆರಂಭಿಕ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಮೊದಲ ಪಂದ್ಯದಲ್ಲಿ ಸಂಜುಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಆದರೆ ಮೂರು ಪಂದ್ಯಗಳ ಸರಣಿ ಆಗಿರುವುದರಿಂದ ವೈಭವ್ ಸೂರ್ಯವಂಶಿಗೂ ಅವಕಾಶ ಸಿಗುವ ನಿರೀಕ್ಷೆ ಇದೆ. ಇನ್ನು ವೈಭವ್ ಇತ್ತೀಚೆಗೆ ದುಲೀಪ್ ಟ್ರೋಫಿಯಂತಹ ದೀರ್ಘ ಮಾದರಿಯ ಪಂದ್ಯಗಳನ್ನು ಆಡಿಕೊಂಡು ಬಂದಿದ್ದಾರೆ. ಹೀಗಾಗಿ ಚುಟುಕು ಮಾದರಿಯ T20ಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು ಎಂಬ ಲೆಕ್ಕಾಚಾರವೂ ಇದೆ. ಇದರ ನಡುವೆ ಇಶಾನ್ ಕಿಶನ್ ಅವರ ಫಿಟ್‌ನೆಸ್ ಕೂಡ ತಂಡದ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ತಿಲಕ್ ವರ್ಮಾ ಕೂಡ ಉತ್ತಮ ಲಯದಲ್ಲಿದ್ದು, ಬ್ಯಾಟಿಂಗ್ ವಿಭಾಗದಲ್ಲಿ ಟೀಂ…