ಕನ್ನಡದ ಹಿರಿಯ ನಟ ಅನಂತನಾಗ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ. ಅವರ ದಶಕಗಳ ಸಿನಿಮಾ ಪಯಣ, ಸಹಜ ಅಭಿನಯ ಮತ್ತು ಚಿತ್ರರಂಗದ ಕೊಡುಗೆಯ ವಿವರ ಇಲ್ಲಿದೆ. ಕನ್ನಡ ಚಿತ್ರರಂಗದ ಹಿರಿಯ ನಟ ಅನಂತನಾಗ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಒಲಿದಿದೆ. ಹಲವು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿರುವ ಅನಂತನಾಗ್ ಅವರ ಕಲಾ ಸೇವೆಗೆ ಇದೀಗ ದೇಶದ ಮಟ್ಟದ ಮಹತ್ವದ ಗೌರವ ದೊರೆತಿದೆ.ರಂಗಭೂಮಿಯ ಹಿನ್ನೆಲೆಯಿಂದ ಬಂದ ಅನಂತನಾಗ್, ಬಳಿಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಅಭಿನಯ ಶೈಲಿಯನ್ನು ರೂಪಿಸಿಕೊಂಡರು. ನಾಯಕನಾಗಿ ಮಾತ್ರವಲ್ಲದೆ, ಪೋಷಕ ನಟ, ಹಾಸ್ಯ ಪಾತ್ರ, ಗಂಭೀರ ಪಾತ್ರ ಹಾಗೂ ವಯಸ್ಸಿಗೆ ತಕ್ಕ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಅನಂತನಾಗ್ ಅವರ ಅಭಿನಯದ ಪ್ರಮುಖ ವಿಶೇಷತೆ ಎಂದರೆ ಸಹಜತೆ. ಪಾತ್ರವನ್ನು ಕೇವಲ ಕ್ಯಾಮೆರಾ ಮುಂದೆ ಅಭಿನಯಿಸುವ ಬದಲು, ಆ ಪಾತ್ರದ ಸ್ವಭಾವವನ್ನು…
Author: praveen
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಲಾಡ್ಜ್‌ವೊಂದರಲ್ಲಿ ಬೆಂಗಳೂರಿನ 23 ವರ್ಷದ ಯುವತಿ ಅನುಮಾನಾಸ್ಪದವಾಗಿ ಮೃ*ತಪಟ್ಟಿರುವ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃ*ತ ಯುವತಿಯನ್ನು ಬೆಂಗಳೂರಿನ ನಿವಾಸಿ ವರ್ಷಾ ಎಂದು ಗುರುತಿಸಲಾಗಿದೆ.ಪೊಲೀಸರ ಪ್ರಕಾರ, ವರ್ಷಾ ಸೆಪ್ಟೆಂಬರ್ 11ರಂದು ತನ್ನ ಇಬ್ಬರು ಸ್ನೇಹಿತರಾದ ರಘು ಹಾಗೂ ದರ್ಶನ್ ಜೊತೆ ಸಕಲೇಶಪುರಕ್ಕೆ ಬಂದಿದ್ದರು. ಹೆಟ್ಟೂರು ಹೋಬಳಿಯ ವಲಲಹಳ್ಳಿ ಕುಡಿಗೆ ಗ್ರಾಮದ ಶ್ರೀದೇವಿ ಲಾಡ್ಜ್‌ನಲ್ಲಿ ಅವರು ತಂಗಿದ್ದರು.ಸೆಪ್ಟೆಂಬರ್ 15ರಂದು ವರ್ಷಾ ಸ್ನಾನ ಮಾಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಹೆಟ್ಟೂರು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿಂದ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಅವರು ಮೃ*ತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ IPS ಅವರ ಪ್ರಕಾರ, ಸಂಜೆ ಸುಮಾರು 7.20ರ ವೇಳೆಗೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಯುವತಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃ*ತಪಟ್ಟಿರುವ ಬಗ್ಗೆ ಮಾಹಿತಿ ಬಂದಿತ್ತು.ವಿಷಯ ತಿಳಿದು ಪೊಲೀಸರು…
ಗದಗ, ಸೆಪ್ಟೆಂಬರ್ 16: ಧರ್ಮದ ಹೆಸರಿನಲ್ಲಿ ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೋರ್ಲಹಳ್ಳಿ ಗ್ರಾಮದ ಮುಸ್ಲಿಂ ಯುವಕರು ಸೌಹಾರ್ದತೆಯ ಸಂದೇಶ ಸಾರುವಂತಹ ವಿಶೇಷ ಆಚರಣೆಗೆ ಸಾಕ್ಷಿಯಾಗಿದ್ದಾರೆ. ಗ್ರಾಮದ ಮಸೀದಿಯಲ್ಲೇ ವಿಘ್ನ ವಿನಾಯಕನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗಣೇಶ ಹಬ್ಬವನ್ನು ಆಚರಿಸುವ ಮೂಲಕ ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಹೊಸ ಅರ್ಥ ನೀಡಿದ್ದಾರೆ. ಕೋರ್ಲಹಳ್ಳಿ ಗ್ರಾಮದಲ್ಲಿ ಈ ಆಚರಣೆ ಇದೇ ಮೊದಲ ಬಾರಿಗೆ ನಡೆಯುತ್ತಿರುವುದಲ್ಲ. ಸತತ ನಾಲ್ಕನೇ ವರ್ಷವೂ ಮಸೀದಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಮೂರು ದಿನಗಳ ಕಾಲ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮುಸ್ಲಿಂ ಯುವಕರೇ ಪೂಜಾ ಕೈಂಕರ್ಯ ಈ ಆಚರಣೆಯ ವಿಶೇಷತೆ ಎಂದರೆ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ಪೂಜಾ ಕೈಂಕರ್ಯಗಳಲ್ಲಿ ಗ್ರಾಮದ ಮುಸ್ಲಿಂ ಯುವಕರು ಕೂಡ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಗಣೇಶ ಹಬ್ಬವನ್ನು ಒಗ್ಗಟ್ಟಿನಿಂದ ಆಚರಿಸುವ ಮೂಲಕ ಧರ್ಮಗಳ ನಡುವೆ ಸಾಮರಸ್ಯ ಮತ್ತು ಸಹಬಾಳ್ವೆಯ ಸಂದೇಶವನ್ನು ಅವರು ಸಾರುತ್ತಿದ್ದಾರೆ. ಗ್ರಾಮದ ಯುವಕರ ಈ ನಡೆ ಸ್ಥಳೀಯವಾಗಿ ಗಮನ…
ಗಣಪತಿ ಆರತಿಯಲ್ಲಿ ಸಲ್ಮಾನ್ ಖಾನ್‌ಗೆ ಸಣ್ಣ ಎಡವಟ್ಟು! ಅಣ್ಣನಿಗೆ ತಂಗಿ ಅರ್ಪಿತಾ ಕೊಟ್ಟ ಕ್ಯೂಟ್ ಸೂಚನೆ ವೈರಲ್ ಸಲ್ಮಾನ್ ಖಾನ್ ಕುಟುಂಬದ ಗಣಪತಿ ವಿಸರ್ಜನೆ ಸಂಭ್ರಮದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಸಹೋದರ ಸೊಹೈಲ್ ಖಾನ್ ಅವರ ನಿವಾಸದಲ್ಲಿ ನಡೆದ ಗಣಪತಿ ಆಚರಣೆಯಲ್ಲಿ ಸಲ್ಮಾನ್ ಕುಟುಂಬದವರೊಂದಿಗೆ ಭಾಗವಹಿಸಿದ್ದರು.ವಿಸರ್ಜನೆಗೂ ಮುನ್ನ ಸಲ್ಮಾನ್ ಖಾನ್ ಗಣಪತಿಗೆ ಆರತಿ ಬೆಳಗಿದರು. ಈ ವೇಳೆ ಅವರು ಆರತಿಯನ್ನು ಸ್ವಲ್ಪ ತಪ್ಪು ದಿಕ್ಕಿನಲ್ಲಿ ಮಾಡುತ್ತಿರುವುದನ್ನು ತಂಗಿ ಅರ್ಪಿತಾ ಗಮನಿಸಿದ್ದಾರೆ. ಕೂಡಲೇ “ಭಾಯ್” ಎಂದು ಕೂಗಿ ಸಲ್ಮಾನ್‌ಗೆ ಸೂಚನೆ ನೀಡಲು ಪ್ರಯತ್ನಿಸಿದ್ದಾರೆ. ಆದರೆ ಸುತ್ತಲಿನ ಭಜನೆ ಹಾಗೂ ಜಯಘೋಷದ ನಡುವೆ ಅವರಿಗೆ ಅದು ಕೇಳಿಸಲಿಲ್ಲ.ನಂತರ ಅರ್ಪಿತಾ ಹತ್ತಿರ ಹೋಗಿ ಆರತಿಯನ್ನು ಸರಿಯಾದ ರೀತಿಯಲ್ಲಿ ಮಾಡಲು ಸೂಚಿಸಿದ್ದಾರೆ. ತಂಗಿಯ ಮಾತನ್ನು ಅರ್ಥ ಮಾಡಿಕೊಂಡ ಸಲ್ಮಾನ್ ನೀಡಿದ ಪ್ರತಿಕ್ರಿಯೆ ಅಲ್ಲಿದ್ದವರ ಗಮನ ಸೆಳೆದಿದೆ.ಈ ಗಣಪತಿ ಸಂಭ್ರಮದಲ್ಲಿ ಸಲ್ಮಾನ್ ಅವರ ಆಪ್ತ ಸ್ನೇಹಿತೆ ಎಂದು ಹೇಳಲಾಗುತ್ತಿರುವ ಇಲಿಯಾ ವಂಟೂರ್ ಕೂಡ ಭಾಗವಹಿಸಿದ್ದರು.…
ಲಂಡನ್: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ನೋಡಲು ಲಂಡನ್‌ನ ದಿ ಶಾರ್ಡ್ ಬಳಿ ನೂರಾರು ಅಭಿಮಾನಿಗಳು ಜಮಾಯಿಸಿದ್ದರಿಂದ, ನಿಗದಿಯಾಗಿದ್ದ ಸಾರ್ವಜನಿಕ ಕಾರ್ಯಕ್ರಮವನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ. ಜನಸಂದಣಿ ಮತ್ತು ಸಾರ್ವಜನಿಕ ಸುರಕ್ಷತೆ ಕುರಿತು ಲಂಡನ್ ಮೆಟ್ರೋಪಾಲಿಟನ್ ಪೊಲೀಸರು ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಸಿಗಲಿಲ್ಲ ಎಂದು ವಿಜಯ್ ಅವರ ತಂಡ ತಿಳಿಸಿದೆ.ವಿಜಯ್ ಅವರನ್ನು ಭೇಟಿಯಾಗಲು ಹಾಗೂ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ನೂರಾರು ಅಭಿಮಾನಿಗಳು ದಿ ಶಾರ್ಡ್ ಹೊರಭಾಗದಲ್ಲಿ ಜಮಾಯಿಸಿದ್ದರು. ಕೆಲವರು ಹಲವು ಗಂಟೆಗಳ ಕಾಲ ಸ್ಥಳದಲ್ಲೇ ಕಾಯುತ್ತಿದ್ದರು. ಆದರೆ ಜನಸಂದಣಿ ಹೆಚ್ಚಾದ ಹಿನ್ನೆಲೆಯಲ್ಲಿ ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಕಾರ್ಯಕ್ರಮವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.ವಿಜಯ್ ಅವರ ತಂಡವು ಲೌಡ್‌ಸ್ಪೀಕರ್ ಮೂಲಕ ಕಾರ್ಯಕ್ರಮ ರದ್ದುಗೊಂಡಿರುವುದನ್ನು ಅಭಿಮಾನಿಗಳಿಗೆ ತಿಳಿಸಿತು. ಸಾರ್ವಜನಿಕ ಸುರಕ್ಷತೆಯ ಕಾರಣದಿಂದ ಹಾಗೂ ಪೊಲೀಸ್ ಅನುಮತಿ ಲಭ್ಯವಾಗದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗುತ್ತಿದೆ ಎಂದು ತಂಡದ ಸದಸ್ಯರು ಘೋಷಿಸಿದರು.ಅಭಿಮಾನಿಗಳಿಗೆ TVK ಮನವಿಕಾರ್ಯಕ್ರಮ ರದ್ದಾದ ಬಳಿಕವೂ ವಿಜಯ್ ಅವರನ್ನು ಭೇಟಿ ಮಾಡಲು ಅಭಿಮಾನಿಗಳು ಹೋಟೆಲ್…
ಬೆಂಗಳೂರು: ರಾಜ್ಯದ ಇಂಜಿನಿಯರ್‌ಗಳಿಗೆ ಕರ್ನಾಟಕ ಸರ್ಕಾರದಿಂದ ಮಹತ್ವದ ಗೌರವ ನೀಡಲಾಗಿದೆ. ಇನ್ನು ಮುಂದೆ ಕರ್ನಾಟಕದ ಇಂಜಿನಿಯರ್‌ಗಳು ತಮ್ಮ ಹೆಸರಿನ ಮುಂದೆ ‘Er’ (Engineer – ಅಭಿಯಂತರರು) ಎಂಬ ಪೂರ್ವಪ್ರತ್ಯಯವನ್ನು ಬಳಸಲು ಸರ್ಕಾರ ಅನುಮತಿ ನೀಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ), ಕರ್ನಾಟಕ ರಾಜ್ಯ ಕೇಂದ್ರದ ವತಿಯಿಂದ ಆಯೋಜಿಸಿದ್ದ 59ನೇ ಅಭಿಯಂತರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಹಾಗೂ ಮೂಲಸೌಕರ್ಯ ನಿರ್ಮಾಣದಲ್ಲಿ ಇಂಜಿನಿಯರ್‌ಗಳ ಪಾತ್ರವನ್ನು ಶ್ಲಾಘಿಸಿದರು. ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿ, ತಾಂತ್ರಿಕ ಜ್ಞಾನ ಮತ್ತು ಸಮಾಜಮುಖಿ ಚಿಂತನೆಗಳು ಇಂದಿಗೂ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಮಾದರಿಯಾಗಿವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಕರ್ನಾಟಕವು ತಂತ್ರಜ್ಞಾನ ಮತ್ತು ನಾವೀನ್ಯತೆಯ ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಇಂಜಿನಿಯರ್‌ಗಳ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ ಎಂದರು. ಇಂಜಿನಿಯರ್‌ಗಳ ಸೇವೆ ಮತ್ತು ಕೊಡುಗೆಯನ್ನು ಗೌರವಿಸುವ ಉದ್ದೇಶದಿಂದ ಅವರ ಹೆಸರಿನ ಮುಂದೆ ‘Er’ ಎಂಬ ಶೀರ್ಷಿಕೆಯನ್ನು…
ಸಂಜು ಸ್ಯಾಮ್ಸನ್ ಅಬ್ಬರಕ್ಕೆ ಅಫ್ಘಾನಿಸ್ತಾನ ಧೂಳೀಪಟ; 2ನೇ T20 ಗೆದ್ದು ಸರಣಿ ಭಾರತದ ವಶ! ದೆಹಲಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 2ನೇ T20 ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತೊಮ್ಮೆ ಭರ್ಜರಿ ಪ್ರದರ್ಶನ ನೀಡಿದೆ.ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 159 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿತು. ಭಾರತದ ಬೌಲಿಂಗ್ ದಾಳಿಯಲ್ಲಿ ನಿತೀಶ್ ಕುಮಾರ್ ರೆಡ್ಡಿ ಪ್ರಮುಖ ಪಾತ್ರ ವಹಿಸಿ 3 ವಿಕೆಟ್ ಕಬಳಿಸಿದರು. 160 ರನ್‌ಗಳ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲೇ ಅಫ್ಘಾನ್ ಬೌಲರ್‌ಗಳ ಮೇಲೆ ಒತ್ತಡ ಹೇರಿತು. ಅಭಿಷೇಕ್ ಶರ್ಮಾ 39 ರನ್‌ಗಳನ್ನು ಕೇವಲ 19 ಎಸೆತಗಳಲ್ಲಿ ಸಿಡಿಸಿದರೆ, ಸಂಜು ಸ್ಯಾಮ್ಸನ್ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿ 57 ರನ್ ಗಳಿಸಿದರು. ನಂತರ ತಿಲಕ್ ವರ್ಮಾ ಮತ್ತು ಇಶಾನ್ ಕಿಶನ್ ತಂಡದ ಗೆಲುವನ್ನು ಸುಲಭಗೊಳಿಸಿದರು. ಭಾರತ 14.5 ಓವರ್‌ಗಳಲ್ಲಿ 163/3 ಗಳಿಸಿ 7 ವಿಕೆಟ್‌ಗಳ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಭಾರತ…
ಕೆಪಿಎಸ್ಸಿ ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮದ ತನಿಖೆ ಮುಂದುವರಿದಂತೆ ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ. ಸಿಐಡಿ ತನಿಖೆಯ ಪ್ರಕಾರ, ಪರೀಕ್ಷೆ ನಡೆಯುವುದಕ್ಕೂ ಸುಮಾರು 15 ದಿನಗಳ ಮುನ್ನವೇ ಪ್ರಶ್ನೆಪತ್ರಿಕೆ ಕೆಲವರ ಕೈ ಸೇರಿತ್ತು ಎನ್ನಲಾಗಿದೆ. ಆರೋಪಿಯಾಗಿರುವ ಬಸವರಾಜ್ ಕನ್ನಾಳೆ ಪ್ರಶ್ನೆಗಳನ್ನು ಪಡೆದುಕೊಂಡ ಬಳಿಕ, ಡೀಲ್ ಆಗಿದ್ದ ಅಭ್ಯರ್ಥಿಗಳನ್ನು ದೇವನಹಳ್ಳಿ ಬಳಿಯ ರೆಸಾರ್ಟ್‌ಗೆ ಕರೆದುಕೊಂಡು ಹೋಗಿ ಪ್ರಶ್ನೆಗಳಿಗೆ ಉತ್ತರಿಸುವ ರೀತಿಯ ಬಗ್ಗೆ ತರಬೇತಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಾದ ಬಳಿಕ ಕೆಲ ಅಭ್ಯರ್ಥಿಗಳು ಇದೇ ಪ್ರಶ್ನೆಗಳನ್ನು ಮತ್ತಷ್ಟು ಅಭ್ಯರ್ಥಿಗಳಿಗೆ 3ರಿಂದ 5 ಲಕ್ಷ ರೂಪಾಯಿವರೆಗೆ ಮಾರಾಟ ಮಾಡಿದ್ದರು ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲೂ ಪ್ರಶ್ನೆಪತ್ರಿಕೆಗಳ ಬಿಕರಿ ನಡೆದಿರುವ ಬಗ್ಗೆಯೂ ತನಿಖಾಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ ಎನ್ನಲಾಗಿದೆ.ಈ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು 400ಕ್ಕೂ ಹೆಚ್ಚು ಆರೋಪಿಗಳು, ಅಭ್ಯರ್ಥಿಗಳು ಹಾಗೂ ಕೆಪಿಎಸ್ಸಿ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದಾರೆ. ರೆಸಾರ್ಟ್‌ನ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆಯಲಾಗಿದ್ದು, ಸೆಕ್ಯುರಿಟಿ ಗಾರ್ಡ್ ಮತ್ತು ಅಭ್ಯರ್ಥಿಗಳನ್ನು ರೆಸಾರ್ಟ್‌ಗೆ…
ಶಿವಮೊಗ್ಗದಲ್ಲಿ ವಂದೇ ಮಾತರಂ ಗಾಯನ ವಿಚಾರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಕೇವಲ ಎರಡು ಚರಣಗಳ ವಂದೇ ಮಾತರಂ ಹಾಡಿಸಿ ನಿಲ್ಲಿಸಿದ್ದಕ್ಕೆ ಬಿಜೆಪಿ ಶಾಸಕ ಎಸ್.ಎನ್. ಚನ್ನಬಸಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ವಂದೇ ಮಾತರಂ ಅನ್ನು ಸಂಪೂರ್ಣವಾಗಿ ಹಾಡಬೇಕು ಎಂದು ಒತ್ತಾಯಿಸಿದ ಅವರು, ಕಾರ್ಯಕ್ರಮದಿಂದಲೇ ಹೊರನಡೆದಿದ್ದಾರೆ. ಸರ್ಕಾರದ ಆದೇಶದಂತೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಎರಡು ಚರಣಗಳನ್ನು ಮಾತ್ರ ಹಾಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.ಇದನ್ನು ಖಂಡಿಸಿರುವ ಚನ್ನಬಸಪ್ಪ, ಸರ್ಕಾರದ ನಿರ್ಧಾರದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಹಾಗೂ ಜನಾಂದೋಲನ ನಡೆಸುವುದಾಗಿ ಹೇಳಿದ್ದಾರೆ.ಈ ಘಟನೆ ಇದೀಗ ಶಿವಮೊಗ್ಗದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಬಾಹ್ಯಾಕಾಶದಲ್ಲಿ ಅಮೆರಿಕಾ ಶಸ್ತ್ರಾಸ್ತ್ರಗಳನ್ನು ಇರಿಸಿದೆ ಎಂಬ ವಿಚಾರ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಬಾಹ್ಯಾಕಾಶದಲ್ಲಿ ಅಮೆರಿಕಾ ಏನು ಮಾಡುತ್ತಿದೆ?ಇದೇ ಪ್ರಶ್ನೆ ಇದೀಗ ಇಡೀ ವಿಶ್ವದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಭೂಮಿಯ ಕಕ್ಷೆಯಲ್ಲೇ ಶಸ್ತ್ರಾಸ್ತ್ರಗಳನ್ನು ಇರಿಸಲಾಗಿದೆ ಎಂಬ ಅಮೆರಿಕದ ಹೇಳಿಕೆಗಳು ಆತಂಕಕ್ಕೆ ಕಾರಣವಾಗಿವೆ. ಶತ್ರು ರಾಷ್ಟ್ರಗಳ ದಾಳಿಯಿಂದ ಅಮೆರಿಕಾ ಮತ್ತು ಅದರ ಮಿತ್ರರಾಷ್ಟ್ರಗಳ ಬಾಹ್ಯಾಕಾಶ ವ್ಯವಸ್ಥೆಗಳನ್ನು ರಕ್ಷಿಸಲು ಈ ರೀತಿಯ ಮಿಲಿಟರಿ ಸಾಮರ್ಥ್ಯಗಳನ್ನು ಬಳಸಲಾಗುತ್ತಿದೆ ಎನ್ನಲಾಗಿದೆ. ಆದರೆ ಅಸಲಿ ಪ್ರಶ್ನೆ ಇಲ್ಲಿದೆ… ಬಾಹ್ಯಾಕಾಶದಲ್ಲಿ ಅಣ್ವಸ್ತ್ರಗಳನ್ನು ಇಡಲಾಗಿದೆಯಾ? 1967ರ Outer Space Treaty ಪ್ರಕಾರ, ಭೂಮಿಯ ಕಕ್ಷೆಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಹಾಗೂ ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು ಇರಿಸುವುದಕ್ಕೆ ನಿಷೇಧವಿದೆ. ಹಾಗಾದರೆ ಅಮೆರಿಕಾ ಹೇಳುತ್ತಿರುವ ಶಸ್ತ್ರಾಸ್ತ್ರಗಳು ಯಾವ ರೀತಿಯವು? ಉಪಗ್ರಹಗಳನ್ನು ರಕ್ಷಿಸುವುದು, ಶತ್ರುಗಳ ಬಾಹ್ಯಾಕಾಶ ವ್ಯವಸ್ಥೆಗಳನ್ನು ತಡೆಯುವುದು ಸೇರಿದಂತೆ ಕೆಲವು ಮಿಲಿಟರಿ ಸಾಮರ್ಥ್ಯಗಳಿಗೆ ಒಪ್ಪಂದದಲ್ಲಿ ಸಂಪೂರ್ಣ ನಿಷೇಧವಿಲ್ಲ. ಆದರೆ ಅಮೆರಿಕದ ಬಾಹ್ಯಾಕಾಶ ಚಟುವಟಿಕೆಗಳ ಬಗ್ಗೆ ರಷ್ಯಾ ಮತ್ತು ಚೀನಾ ಈಗಾಗಲೇ ಆತಂಕ ವ್ಯಕ್ತಪಡಿಸುತ್ತಿವೆ. ಬಾಹ್ಯಾಕಾಶವೇ ಮುಂದಿನ…