ಬಾಹ್ಯಾಕಾಶದಲ್ಲಿ ಅಮೆರಿಕಾ ಶಸ್ತ್ರಾಸ್ತ್ರಗಳನ್ನು ಇರಿಸಿದೆ ಎಂಬ ವಿಚಾರ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಬಾಹ್ಯಾಕಾಶದಲ್ಲಿ ಅಮೆರಿಕಾ ಏನು ಮಾಡುತ್ತಿದೆ?
ಇದೇ ಪ್ರಶ್ನೆ ಇದೀಗ ಇಡೀ ವಿಶ್ವದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಭೂಮಿಯ ಕಕ್ಷೆಯಲ್ಲೇ ಶಸ್ತ್ರಾಸ್ತ್ರಗಳನ್ನು ಇರಿಸಲಾಗಿದೆ ಎಂಬ ಅಮೆರಿಕದ ಹೇಳಿಕೆಗಳು ಆತಂಕಕ್ಕೆ ಕಾರಣವಾಗಿವೆ.

ಶತ್ರು ರಾಷ್ಟ್ರಗಳ ದಾಳಿಯಿಂದ ಅಮೆರಿಕಾ ಮತ್ತು ಅದರ ಮಿತ್ರರಾಷ್ಟ್ರಗಳ ಬಾಹ್ಯಾಕಾಶ ವ್ಯವಸ್ಥೆಗಳನ್ನು ರಕ್ಷಿಸಲು ಈ ರೀತಿಯ ಮಿಲಿಟರಿ ಸಾಮರ್ಥ್ಯಗಳನ್ನು ಬಳಸಲಾಗುತ್ತಿದೆ ಎನ್ನಲಾಗಿದೆ.

ಆದರೆ ಅಸಲಿ ಪ್ರಶ್ನೆ ಇಲ್ಲಿದೆ…


ಬಾಹ್ಯಾಕಾಶದಲ್ಲಿ ಅಣ್ವಸ್ತ್ರಗಳನ್ನು ಇಡಲಾಗಿದೆಯಾ?

1967ರ Outer Space Treaty ಪ್ರಕಾರ, ಭೂಮಿಯ ಕಕ್ಷೆಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಹಾಗೂ ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು ಇರಿಸುವುದಕ್ಕೆ ನಿಷೇಧವಿದೆ.

ಹಾಗಾದರೆ ಅಮೆರಿಕಾ ಹೇಳುತ್ತಿರುವ ಶಸ್ತ್ರಾಸ್ತ್ರಗಳು ಯಾವ ರೀತಿಯವು?

ಉಪಗ್ರಹಗಳನ್ನು ರಕ್ಷಿಸುವುದು, ಶತ್ರುಗಳ ಬಾಹ್ಯಾಕಾಶ ವ್ಯವಸ್ಥೆಗಳನ್ನು ತಡೆಯುವುದು ಸೇರಿದಂತೆ ಕೆಲವು ಮಿಲಿಟರಿ ಸಾಮರ್ಥ್ಯಗಳಿಗೆ ಒಪ್ಪಂದದಲ್ಲಿ ಸಂಪೂರ್ಣ ನಿಷೇಧವಿಲ್ಲ.

ಆದರೆ ಅಮೆರಿಕದ ಬಾಹ್ಯಾಕಾಶ ಚಟುವಟಿಕೆಗಳ ಬಗ್ಗೆ ರಷ್ಯಾ ಮತ್ತು ಚೀನಾ ಈಗಾಗಲೇ ಆತಂಕ ವ್ಯಕ್ತಪಡಿಸುತ್ತಿವೆ.

ಬಾಹ್ಯಾಕಾಶವೇ ಮುಂದಿನ ಮಹಾಯುದ್ಧದ ಹೊಸ ರಣಾಂಗಣವಾಗುತ್ತಾ?
ಅಥವಾ ಇದು ಕೇವಲ ರಕ್ಷಣಾ ತಂತ್ರವೇ?

ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಅಮೆರಿಕಾ ಯಾವ ರೀತಿಯ ಶಸ್ತ್ರಾಸ್ತ್ರಗಳ ಬಗ್ಗೆ ಮಾತನಾಡುತ್ತಿದೆ ಎಂಬುದು ಸ್ಪಷ್ಟವಾಗಬೇಕು.

Share.
Leave A Reply

Exit mobile version