Close Menu
    Facebook X (Twitter) Instagram
    • ಮುಖಪುಟ
    • ತಾಜಾ ಸುದ್ದಿ
    • ಜಿಲ್ಲೆ
    • ರಾಷ್ಟ್ರೀಯ
    • ಅಂತರರಾಷ್ಟ್ರೀಯ
    • ರಾಜಕೀಯ
    • ಚಿತ್ರರಂಗ
    • ಅಪರಾಧ
    • ಕ್ರೀಡೆ
    Facebook X (Twitter) Instagram
    Home»Bangalore»ರಸ್ತೆ ಅಪಘಾ*ತದಲ್ಲಿ ಬ್ರೈನ್ ಡೆಡ್ ಆದ ಟೆಕ್ಕಿ; ಮಗನ ಅಗಲಿಕೆಯ ನೋವಿನಲ್ಲೂ ಅಂಗಾಂಗ ದಾನ ಮಾಡಿದ ಹೆತ್ತವರು
    Bangalore

    ರಸ್ತೆ ಅಪಘಾ*ತದಲ್ಲಿ ಬ್ರೈನ್ ಡೆಡ್ ಆದ ಟೆಕ್ಕಿ; ಮಗನ ಅಗಲಿಕೆಯ ನೋವಿನಲ್ಲೂ ಅಂಗಾಂಗ ದಾನ ಮಾಡಿದ ಹೆತ್ತವರು

    praveenBy praveenOctober 3, 2026No Comments1 Min Read
    Facebook Twitter Pinterest LinkedIn Tumblr Email
    Share
    Facebook Twitter LinkedIn Pinterest Email

    ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಯುವ ಸಾಫ್ಟ್‌ವೇರ್ ಇಂಜಿನಿಯರ್‌ ಒಬ್ಬರ ದುರಂತ ಅಂತ್ಯ ಕುಟುಂಬಕ್ಕೆ ಆಘಾತ ತಂದಿದೆ.

    ಆದರೆ ಮಗನನ್ನು ಕಳೆದುಕೊಂಡ ದುಃಖದ ನಡುವೆಯೇ ಪೋಷಕರು ತೆಗೆದುಕೊಂಡ ನಿರ್ಧಾರ ಹಲವು ಜೀವಗಳಿಗೆ ಹೊಸ ಭರವಸೆ ನೀಡಿದೆ.

    ಚಾಕೇನಹಳ್ಳಿಕಟ್ಟೆ ಗ್ರಾಮದ ಚಂದ್ರೇಗೌಡ ಹಾಗೂ ಶಿವಮ್ಮ ದಂಪತಿಯ ಏಕೈಕ ಪುತ್ರ ರವಿಕುಮಾರ್ (31) ಅಪಘಾ*ತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.

    ಬೆಂಗಳೂರಿನ ವಿಪ್ರೋ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಅವರು ರಜೆಗಾಗಿ ಊರಿಗೆ ಬಂದಿದ್ದ ಸಂದರ್ಭದಲ್ಲಿ ಜುಲೈ 6ರಂದು ಪರಸನಹಳ್ಳಿ ಬಳಿ ರಸ್ತೆ ಅಪಘಾ*ತ ಸಂಭವಿಸಿತ್ತು.

    ಅಪಘಾ*ತದಲ್ಲಿ ತಲೆಗೆ ಗಂಭೀರ ಗಾಯವಾಗಿದ್ದ ಹಿನ್ನೆಲೆಯಲ್ಲಿ ರವಿಕುಮಾರ್ ಅವರನ್ನು ಬೆಂಗಳೂರಿನ ಹೆಬ್ಬಾಳದಲ್ಲಿರುವ ಆಸ್ಟರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಸುದೀರ್ಘ ಅವಧಿಯ ಚಿಕಿತ್ಸೆ ನೀಡಿದರೂ ಅವರ ಆರೋಗ್ಯದಲ್ಲಿ ನಿರೀಕ್ಷಿತ ಚೇತರಿಕೆ ಕಂಡುಬರಲಿಲ್ಲ.

    ವೈದ್ಯರು ರವಿಕುಮಾರ್ ಅವರ ಮೆದುಳು ನಿಷ್ಕ್ರಿಯಗೊಂಡಿರುವುದನ್ನು ದೃಢಪಡಿಸಿದ ಬಳಿಕ ಕುಟುಂಬದ ಮುಂದೆ ಅತ್ಯಂತ ಕಠಿಣ ಪರಿಸ್ಥಿತಿ ಎದುರಾಯಿತು. ಏಕೈಕ ಮಗನನ್ನು ಕಳೆದುಕೊಂಡ ನೋವಿನಲ್ಲಿದ್ದರೂ, ಅವರ ಪೋಷಕರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡುವ ಮೂಲಕ ಮಹತ್ವದ ಮಾನವೀಯ ನಿರ್ಧಾರ ಕೈಗೊಂಡಿದ್ದಾರೆ.

    ‘ಜೀವಸಾರ್ಥಕತೆ’

    brain dead Hassan News organ donation ಅಂಗಾಂಗ ದಾನ ಅಂಗಾಂಗ ದಾನ ಮಹತ್ವ ಆಸ್ಟರ್ ಆಸ್ಪತ್ರೆ ಚಾಕೇನಹಳ್ಳಿಕಟ್ಟೆ ಜೀವಸಾರ್ಥಕತೆ ಪೋಷಕರು ಬ್ರೈನ್ ಡೆಡ್ ಮಾನವೀಯತೆ ರವಿಕುಮಾರ್ ರಸ್ತೆ ಅಪಘಾತ ವಿಪ್ರೋ ಸಾಫ್ಟ್‌ವೇರ್ ಇಂಜಿನಿಯರ್ ಹಾಸನ ಹೊಳೆನರಸೀಪುರ
    Share. Facebook Twitter Pinterest LinkedIn Tumblr Email
    praveen

    Related Posts

    ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂಗ್ ಷಡ್ಯಂತ್ರ? ಕೃಪಾ ಆಳ್ವಾ ಹೆಸರು ಪ್ರಸ್ತಾಪಿಸಿ ಎಚ್‌.ಡಿ. ಕುಮಾರಸ್ವಾಮಿ ಸ್ಫೋಟಕ ಆರೋಪ!

    October 15, 2026

    ರೇಣುಕಾಸ್ವಾಮಿ ಕೇಸ್‌ಗೆ ಹೊಸ ತಿರುವು? ‘ಆ ವಿಷಯ ಗೊತ್ತೇ ಇಲ್ಲ’ ಎಂದ ಯಶಸ್ ಸೂರ್ಯ; ಸಾಕ್ಷಿ ಹೇಳಿಕೆಗೆ ಎಸ್‌ಪಿಪಿ ಆಕ್ಷೇಪ!

    October 13, 2026

    ಸುದೀಪ್ ತಾಯಿ ಹೆಸರಲ್ಲಿ ಕ್ರಿಕೆಟ್ ಟೂರ್ನಿ ನೆಪದಲ್ಲಿ ದೋಖಾ ಆರೋಪ! 27 ತಂಡಗಳಿಂದ ಹಣ ಸಂಗ್ರಹಿಸಿ ಪರಾರಿ?

    October 13, 2026
    Leave A Reply Cancel Reply

    Quick Links

    • Home
    • About
    • Contact Us

    Social Media

    • Instagram
    • YouTube
    • Facebook

    Designed by Cryptical Software.