Close Menu
    Facebook X (Twitter) Instagram
    • ಮುಖಪುಟ
    • ತಾಜಾ ಸುದ್ದಿ
    • ಜಿಲ್ಲೆ
    • ರಾಷ್ಟ್ರೀಯ
    • ಅಂತರರಾಷ್ಟ್ರೀಯ
    • ರಾಜಕೀಯ
    • ಚಿತ್ರರಂಗ
    • ಅಪರಾಧ
    • ಕ್ರೀಡೆ
    Facebook X (Twitter) Instagram
    Home»LATEST NEWS»ತಿರುಮಲದಲ್ಲಿ ಇನ್ಮುಂದೆ ದಾರಿ ತಪ್ಪುವ ಭಯವಿಲ್ಲ! ಕನ್ನಡದಲ್ಲೂ ‘ವೆಂಕಟಾದ್ರಿ’ ಆ್ಯಪ್ ಲಭ್ಯ
    LATEST NEWS

    ತಿರುಮಲದಲ್ಲಿ ಇನ್ಮುಂದೆ ದಾರಿ ತಪ್ಪುವ ಭಯವಿಲ್ಲ! ಕನ್ನಡದಲ್ಲೂ ‘ವೆಂಕಟಾದ್ರಿ’ ಆ್ಯಪ್ ಲಭ್ಯ

    praveenBy praveenOctober 13, 2026Updated:October 13, 2026No Comments1 Min Read
    Facebook Twitter Pinterest LinkedIn Tumblr Email
    Share
    Facebook Twitter LinkedIn Pinterest Email

    ತಿರುಮಲಕ್ಕೆ ಭೇಟಿ ನೀಡುವ ಭಕ್ತರ ಅನುಕೂಲಕ್ಕಾಗಿ ತಿರುಮಲ ತಿರುಪತಿ ದೇವಸ್ಥಾನಂ (TTD) ‘ವೆಂಕಟಾದ್ರಿ’ ಎಂಬ ನೂತನ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ವರ್ಚುವಲ್ ಮೂಲಕ ಆ್ಯಪ್‌ಗೆ ಚಾಲನೆ ನೀಡಿದ್ದಾರೆ.

    ತಿರುಮಲಕ್ಕೆ ಹೊಸದಾಗಿ ಬರುವ ಭಕ್ತರಿಗೆ ರಸ್ತೆ, ವಸತಿ ಕೊಠಡಿಗಳ ಕೌಂಟರ್‌, ದರ್ಶನದ ಸರತಿ ಸಾಲುಗಳು ಹಾಗೂ ಇತರ ಪ್ರಮುಖ ಸ್ಥಳಗಳನ್ನು ಹುಡುಕಲು ಆಗುವ ತೊಂದರೆಗಳನ್ನು ನಿವಾರಿಸುವುದು ಈ ಆ್ಯಪ್‌ನ ಉದ್ದೇಶವಾಗಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲಿಷ್—ಒಟ್ಟು ಐದು ಭಾಷೆಗಳಲ್ಲಿ ಆ್ಯಪ್ ಮಾಹಿತಿ ನೀಡಲಿದೆ.

    ತಿರುಮಲದ 25 ವಿಭಾಗಗಳಲ್ಲಿರುವ ಸುಮಾರು 350ಕ್ಕೂ ಹೆಚ್ಚು ಪ್ರಮುಖ ಸ್ಥಳಗಳ ಮಾಹಿತಿಯನ್ನು ಇದರಲ್ಲಿ ಸೇರಿಸಲಾಗಿದೆ. ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಸ್ಥಳಗಳನ್ನು ಪತ್ತೆಹಚ್ಚಲು ಅನುಕೂಲವಾಗುವಂತೆ ಆಫ್‌ಲೈನ್ ನ್ಯಾವಿಗೇಶನ್ ಸೌಲಭ್ಯವನ್ನೂ ಒದಗಿಸಲಾಗಿದೆ.

    24 ಗಂಟೆಯೂ AI ವಾಯ್ಸ್ ಅಸಿಸ್ಟೆಂಟ್ ಸೇವೆ

    ಆ್ಯಪ್‌ನಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ವಾಯ್ಸ್ ಅಸಿಸ್ಟೆಂಟ್ ಸೌಲಭ್ಯವಿದ್ದು, ಭಕ್ತರು ಧ್ವನಿ ಆದೇಶಗಳ ಮೂಲಕ ತಮಗೆ ಬೇಕಾದ ಸ್ಥಳಗಳ ಮಾಹಿತಿ ಪಡೆಯಬಹುದು. ವಾಹನ ನಿಲುಗಡೆ ಮಾಡಿದ ಸ್ಥಳವನ್ನು ಗುರುತಿಸಲು ‘ಮಾರ್ಕ್ ಮೈ ಸ್ಪಾಟ್’ ವೈಶಿಷ್ಟ್ಯವೂ ಲಭ್ಯವಿದೆ.

    ವಸತಿ ಕೌಂಟರ್‌ಗಳು, ದರ್ಶನದ ಕ್ಯೂ ಲೈನ್‌ಗಳು, ಉಚಿತ ಅನ್ನಪ್ರಸಾದ ಕೇಂದ್ರಗಳು, ಕ್ಯಾಂಟೀನ್‌ಗಳು, ಲಗೇಜ್ ಕೌಂಟರ್‌ಗಳು, ಪಾದರಕ್ಷೆ ಠೇವಣಿ ಕೇಂದ್ರಗಳು, ಕಲ್ಯಾಣಕಟ್ಟೆ, ಕುಡಿಯುವ ನೀರಿನ ಘಟಕಗಳು ಮತ್ತು ಶೌಚಾಲಯಗಳನ್ನು ಸುಲಭವಾಗಿ ಹುಡುಕಬಹುದು. ಆಸ್ಪತ್ರೆಗಳು, ಪೊಲೀಸ್ ಠಾಣೆಗಳು, ಪಾರ್ಕಿಂಗ್ ಸ್ಥಳಗಳು, ಉಚಿತ ಬಸ್ ಮಾರ್ಗಗಳು ಹಾಗೂ ಬಸ್ ವೇಳಾಪಟ್ಟಿಗಳ ಮಾಹಿತಿಯೂ ದೊರೆಯಲಿದೆ.

    ತುರ್ತು ಸಂದರ್ಭಗಳಲ್ಲಿ ನೆರವು ಪಡೆಯಲು ಟಿಟಿಡಿ ಹೆಲ್ಪ್‌ಲೈನ್, ಪೊಲೀಸ್ ಸಹಾಯವಾಣಿ ಮತ್ತು ತುರ್ತು ಸಂಪರ್ಕ ಸಂಖ್ಯೆಗಳನ್ನು ಒಂದೇ ಸ್ಪರ್ಶದಲ್ಲಿ ಸಂಪರ್ಕಿಸುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಸ್ಮಾರ್ಟ್‌ಫೋನ್ ಬಳಸದ ಭಕ್ತರಿಗಾಗಿ ತಿರುಮಲದಲ್ಲಿ ಡಿಜಿಟಲ್ ಕಿಯೋಸ್ಕ್‌ಗಳನ್ನು ಸ್ಥಾಪಿಸುವ ಯೋಜನೆಯೂ ಇದೆ.

    ಭಕ್ತರು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆ್ಯಪ್ ಸ್ಟೋರ್‌ನಲ್ಲಿ ‘Venkatadri’ ಆ್ಯಪ್ ಲಭ್ಯತೆಯನ್ನು ಪರಿಶೀಲಿಸಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹೊಸ ಆ್ಯಪ್‌ನಿಂದ ತಿರುಮಲದಲ್ಲಿ ದಾರಿ ಹುಡುಕುವ ಗೊಂದಲ ಕಡಿಮೆಯಾಗಿ, ಭಕ್ತರ ಯಾತ್ರೆ ಹೆಚ್ಚು ಸುಲಭವಾಗುವ ನಿರೀಕ್ಷೆಯಿದೆ.

    AI Voice Assistant Chandrababu Naidu Kannada News Madhyama Kannada Madhyama News Mark My Spot Feature Tirumala Facilities Tirumala Kannada News Tirumala Mobile App Tirumala News Tirumala Offline Navigation Tirumala Temple Tirumala Tourist Guide Tirupati Updates TTD Latest News TTD Mobile App TTD News Venkatadri App ಕನ್ನಡ ವೆಂಕಟಾದ್ರಿ ಆ್ಯಪ್ ಕನ್ನಡ ಸುದ್ದಿ ತಿರುಪತಿ ದೇವಸ್ಥಾನ ತಿರುಪತಿ ಸುದ್ದಿ ತಿರುಮಲ ದರ್ಶನ ತಿರುಮಲ ಭಕ್ತರು ತಿರುಮಲ ಯಾತ್ರೆ ತಿರುಮಲ ವೆಂಕಟಾದ್ರಿ ಆ್ಯಪ್ ತಿರುಮಲ ಸುದ್ದಿ
    Share. Facebook Twitter Pinterest LinkedIn Tumblr Email
    praveen

    Related Posts

    ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂಗ್ ಷಡ್ಯಂತ್ರ? ಕೃಪಾ ಆಳ್ವಾ ಹೆಸರು ಪ್ರಸ್ತಾಪಿಸಿ ಎಚ್‌.ಡಿ. ಕುಮಾರಸ್ವಾಮಿ ಸ್ಫೋಟಕ ಆರೋಪ!

    October 15, 2026

    ರೇಣುಕಾಸ್ವಾಮಿ ಕೇಸ್‌ಗೆ ಹೊಸ ತಿರುವು? ‘ಆ ವಿಷಯ ಗೊತ್ತೇ ಇಲ್ಲ’ ಎಂದ ಯಶಸ್ ಸೂರ್ಯ; ಸಾಕ್ಷಿ ಹೇಳಿಕೆಗೆ ಎಸ್‌ಪಿಪಿ ಆಕ್ಷೇಪ!

    October 13, 2026

    ಸುದೀಪ್ ತಾಯಿ ಹೆಸರಲ್ಲಿ ಕ್ರಿಕೆಟ್ ಟೂರ್ನಿ ನೆಪದಲ್ಲಿ ದೋಖಾ ಆರೋಪ! 27 ತಂಡಗಳಿಂದ ಹಣ ಸಂಗ್ರಹಿಸಿ ಪರಾರಿ?

    October 13, 2026
    Leave A Reply Cancel Reply

    Quick Links

    • Home
    • About
    • Contact Us

    Social Media

    • Instagram
    • YouTube
    • Facebook

    Designed by Cryptical Software.