ಮೈಸೂರು ದಸರಾ ಮಹೋತ್ಸವಕ್ಕೆ ಸಜ್ಜಾಗುತ್ತಿರುವ ಗಜಪಡೆಯ ಆನೆಗಳ ತೂಕದ ವಿವರ ಹೊರಬಿದ್ದಿದೆ.

ಎರಡನೇ ತಂಡದಲ್ಲಿ ಮೈಸೂರಿಗೆ ಆಗಮಿಸಿರುವ ಸುಗ್ರೀವ ಆನೆ ಬರೋಬ್ಬರಿ 5,850 ಕೆ.ಜಿ. ತೂಕ ಹೊಂದಿರುವುದು ವಿಶೇಷ ಗಮನ ಸೆಳೆದಿದೆ.
ಇದರೊಂದಿಗೆ ದಸರಾ ಗಜಪಡೆಯಲ್ಲೇ ಅತಿ ಹೆಚ್ಚು ತೂಕ ಹೊಂದಿರುವ ಆನೆ ಎಂಬ ಹೆಗ್ಗಳಿಕೆಗೆ ಸುಗ್ರೀವ ಪಾತ್ರನಾಗಿದ್ದಾನೆ.
ಇದಕ್ಕೂ ಮೊದಲು ಮೊದಲ ತಂಡದಲ್ಲಿ ಆಗಮಿಸಿದ್ದ ಶ್ರೀಕಂಠ ಆನೆ 5,770 ಕೆ.ಜಿ. ತೂಕ ಹೊಂದುವ ಮೂಲಕ ಗಜಪಡೆಯ ಭಾರೀ ಆನೆ ಎನಿಸಿಕೊಂಡಿತ್ತು.
ಆದರೆ ಇದೀಗ ಸುಗ್ರೀವ ಶ್ರೀಕಂಠನಿಗಿಂತ 80 ಕೆ.ಜಿ. ಹೆಚ್ಚು ತೂಕ ಹೊಂದುವ ಮೂಲಕ ಮೊದಲ ಸ್ಥಾನಕ್ಕೇರಿದ್ದಾನೆ.
ಇನ್ನು ಎರಡನೇ ತಂಡದಲ್ಲಿರುವ ಚೈತ್ರ ಆನೆ 3,295 ಕೆ.ಜಿ. ಹಾಗೂ ರೂಪಾ ಆನೆ 3,260 ಕೆ.ಜಿ. ತೂಕ ಹೊಂದಿವೆ.
ಅಂದಹಾಗೆ, ಮೈಸೂರು ದಸರಾ ಜಂಬೂಸವಾರಿಯಲ್ಲಿ ಆನೆಗಳ ಭವ್ಯ ಹೆಜ್ಜೆ ನೋಡಲು ಜನ ಕಾತರರಾಗಿದ್ದಾರೆ.
ಈ ಬಾರಿಯ ದಸರಾ ಗಜಪಡೆಯ ಪ್ರಮುಖ ಆಕರ್ಷಣೆಯಾಗಿರುವ ಸುಗ್ರೀವ ತನ್ನ ಭಾರೀ ತೂಕದ ಮೂಲಕವೇ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾನೆ.
ಮೈಸೂರು ದಸರಾ ಗಜಪಡೆಯಲ್ಲಿ ಸುಗ್ರೀವನದ್ದೇ ತೂಕದ ತಾಕತ್ತು!