Close Menu
    Facebook X (Twitter) Instagram
    • ಮುಖಪುಟ
    • ತಾಜಾ ಸುದ್ದಿ
    • ಜಿಲ್ಲೆ
    • ರಾಷ್ಟ್ರೀಯ
    • ಅಂತರರಾಷ್ಟ್ರೀಯ
    • ರಾಜಕೀಯ
    • ಚಿತ್ರರಂಗ
    • ಅಪರಾಧ
    • ಕ್ರೀಡೆ
    Facebook X (Twitter) Instagram
    Home»Bangalore»ಗಣೇಶ ಹಬ್ಬದ ದಿನವೇ ಡಾಲಿ ಧನಂಜಯ್ ಮಗನ ಹೆಸರು ರಿವೀಲ್; ‘ಎರೆಯ’ ಹೆಸರಿನ ವಿಶೇಷತೆ ಏನು?
    Bangalore

    ಗಣೇಶ ಹಬ್ಬದ ದಿನವೇ ಡಾಲಿ ಧನಂಜಯ್ ಮಗನ ಹೆಸರು ರಿವೀಲ್; ‘ಎರೆಯ’ ಹೆಸರಿನ ವಿಶೇಷತೆ ಏನು?

    praveenBy praveenSeptember 14, 2026No Comments1 Min Read
    Facebook Twitter Pinterest LinkedIn Tumblr Email
    Share
    Facebook Twitter LinkedIn Pinterest Email

    ನಟ ಡಾಲಿ ಧನಂಜಯ್ ಹಾಗೂ ಧನ್ಯತಾ ದಂಪತಿ ತಮ್ಮ ಮಗನಿಗೆ ‘ಎರೆಯ’ ಎಂದು ನಾಮಕರಣ ಮಾಡಿರುವುದಾಗಿ ಗಣೇಶ ಚತುರ್ಥಿಯ ವಿಶೇಷ ದಿನದಂದು ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಗನ ಹೆಸರನ್ನು ವಿಭಿನ್ನವಾಗಿ ಪರಿಚಯಿಸಿರುವ ಡಾಲಿ ದಂಪತಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

    ಕರ್ನಾಟಕದ ನಕ್ಷೆಯ ಮಧ್ಯಭಾಗದಲ್ಲಿ ಮಗನ ಹೆಸರು ಮೂಡುವಂತೆ ವಿಶೇಷವಾಗಿ ವಿನ್ಯಾಸಗೊಳಿಸಿದ ಡಾಲರ್‌ ಮೂಲಕ ತಮ್ಮ ಪುಟ್ಟ ಮಗನ ಹೆಸರನ್ನು ಡಾಲಿ ದಂಪತಿ ರಿವೀಲ್ ಮಾಡಿದ್ದಾರೆ. ಈ ಮೂಲಕ ಕನ್ನಡದ ನೆಲ-ನುಡಿಯೊಂದಿಗೆ ಹೆಸರನ್ನು ಬೆಸೆದಿರುವುದು ವಿಶೇಷ ಗಮನ ಸೆಳೆದಿದೆ.

    ‘ಎರೆಯ’ ಎಂಬ ಹೆಸರು ಕೂಡ ವಿಶೇಷ ಅರ್ಥವನ್ನು ಹೊಂದಿದೆ. ಎರೆಯ ಎಂದರೆ ಒಡೆಯ, ಅಧಿಪತಿ ಎಂಬ ಅರ್ಥವಿದೆ. ಇತಿಹಾಸದ ಉಲ್ಲೇಖಗಳಲ್ಲೂ ಇಮ್ಮಡಿ ಪುಲಕೇಶಿಯ ಬಾಲ್ಯದ ಹೆಸರು ‘ಎರೆಯ’ ಎಂದಿತ್ತು ಎನ್ನಲಾಗುತ್ತದೆ. ಹೀಗಾಗಿ ಪಾರಂಪರಿಕ ಹಿನ್ನೆಲೆ ಹೊಂದಿರುವ ಈ ಹೆಸರನ್ನು ಮಗನಿಗೆ ಆಯ್ಕೆ ಮಾಡಿರುವುದು ಕುತೂಹಲ ಮೂಡಿಸಿದೆ.

    ಮಗನ ಹೆಸರನ್ನು ಪರಿಚಯಿಸುವಾಗ ಡಾಲಿ ಧನಂಜಯ್ ಹಾಗೂ ಧನ್ಯತಾ, ತಮ್ಮ ಪುಟ್ಟ ಮಗನನ್ನು “ನಮ್ಮ ಪುಟ್ಟ ಬದುಕಿನ ಅಧಿಪತಿ, ನಮ್ಮ ಹೃದಯದ ರಾಜ ನಮ್ಮ ಎರೆಯ” ಎಂದು ಪ್ರೀತಿಯಿಂದ ಕರೆದಿದ್ದಾರೆ.

    ಕಳೆದ ವರ್ಷ ಮೈಸೂರಿನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದ ಡಾಲಿ ಧನಂಜಯ್ ಹಾಗೂ ಧನ್ಯತಾ, ಇದೀಗ ಪೋಷಕರಾಗಿರುವ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗಷ್ಟೇ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಂಡು ತಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಆಗಮನದ ಸಂತಸವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

    ಇದೀಗ ಗಣೇಶ ಹಬ್ಬದ ಶುಭ ದಿನದಂದು ಮಗನ ಹೆಸರನ್ನು ಅಧಿಕೃತವಾಗಿ ಬಹಿರಂಗಪಡಿಸಿರುವ ಡಾಲಿ ದಂಪತಿಯ ‘ಎರೆಯ’ ಹೆಸರಿನ ಆಯ್ಕೆ ಅಭಿಮಾನಿಗಳ ಗಮನ ಸೆಳೆದಿದೆ.

    Celebrity News Dhanayatha Dolly Dhananjaya Ereya Kannada Cinema Latest Kannada News Sandalwood News ಎರೆಯ ಎರೆಯ ಹೆಸರು ಕನ್ನಡ ನಟ ಕನ್ನಡ ಸಿನಿ ಸುದ್ದಿ ಕನ್ನಡ ಸಿನಿಮಾ ಕನ್ನಡ ಸುದ್ದಿ ಕರ್ನಾಟಕ ಗಣೇಶ ಚತುರ್ಥಿ ಡಾಲಿ ಧನಂಜಯ್ ಡಾಲಿ ಧನಂಜಯ್ ನ್ಯೂಸ್ ಡಾಲಿ ಧನಂಜಯ್ ಬೇಬಿ ಡಾಲಿ ಧನಂಜಯ್ ಮಗ ಡಾಲಿ ಮಗನ ಹೆಸರು ಧನಂಜಯ್ ಧನಯತಾ ಮಗುವಿನ ಹೆಸರು ಸೆಲೆಬ್ರಿಟಿ ನ್ಯೂಸ್ ಸ್ಯಾಂಡಲ್‌ವುಡ್
    Share. Facebook Twitter Pinterest LinkedIn Tumblr Email
    praveen

    Related Posts

    ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂಗ್ ಷಡ್ಯಂತ್ರ? ಕೃಪಾ ಆಳ್ವಾ ಹೆಸರು ಪ್ರಸ್ತಾಪಿಸಿ ಎಚ್‌.ಡಿ. ಕುಮಾರಸ್ವಾಮಿ ಸ್ಫೋಟಕ ಆರೋಪ!

    October 15, 2026

    ರೇಣುಕಾಸ್ವಾಮಿ ಕೇಸ್‌ಗೆ ಹೊಸ ತಿರುವು? ‘ಆ ವಿಷಯ ಗೊತ್ತೇ ಇಲ್ಲ’ ಎಂದ ಯಶಸ್ ಸೂರ್ಯ; ಸಾಕ್ಷಿ ಹೇಳಿಕೆಗೆ ಎಸ್‌ಪಿಪಿ ಆಕ್ಷೇಪ!

    October 13, 2026

    ಸುದೀಪ್ ತಾಯಿ ಹೆಸರಲ್ಲಿ ಕ್ರಿಕೆಟ್ ಟೂರ್ನಿ ನೆಪದಲ್ಲಿ ದೋಖಾ ಆರೋಪ! 27 ತಂಡಗಳಿಂದ ಹಣ ಸಂಗ್ರಹಿಸಿ ಪರಾರಿ?

    October 13, 2026
    Leave A Reply Cancel Reply

    Quick Links

    • Home
    • About
    • Contact Us

    Social Media

    • Instagram
    • YouTube
    • Facebook

    Designed by Cryptical Software.